Friday, April 26, 2024
spot_imgspot_img
spot_imgspot_img

42 ಅಡಿ ಆಳದ ಬಾವಿಗೆ ನಾಲ್ಕು ದಿನಗಳ ಹಿಂದೆ ಬಿದ್ದಿದ್ದ ನಾಗರಾಜನ ರಕ್ಷಿಸಿದ ಉರಗಪ್ರೇಮಿ ಮುರಳೀಧರ ವಿಟ್ಲ; ಆಪತ್ಕಾಲದಲ್ಲಿ ಕೈಹಿಡಿದವನೇ ಆಪತ್ಭಾಂಧವ

- Advertisement -G L Acharya panikkar
- Advertisement -

ವಿಟ್ಲ: ಕೊಳ್ನಾಡು ಗ್ರಾಮದಲ್ಲಿ ನಾಲ್ಕು ದಿನಗಳ ಹಿಂದೆ ನಲ್ವತ್ತೆರಡು ಅಡಿ ಆಳದ ಬಾವಿಗೆ ಬಿದ್ದ ನಾಗರಹಾವನ್ನು ಫ್ರೆಂಡ್ಸ್ ವಿಟ್ಲದ ತಂಡ ರಕ್ಷಿಸುವಲ್ಲಿ ಯಶಸ್ವಿಯಾಗಿದೆ.

vtv vitla
vtv vitla

ಕೊಳ್ನಾಡು ಗ್ರಾಮದ ಸಾಲೆತ್ತೂರು ಸಮೀಪದ ಕುಡ್ತಾಜೆ ತನಿಯಪ್ಪ ಪೂಜಾರಿಯವರ ಮನೆಯ 42ಅಡಿ ಆಳದ ಬಾವಿಗೆ ನಾಲ್ಕು ದಿನಗಳ ಹಿಂದೆ ನಾಗರ ಹಾವೊಂದು ಬಿದ್ದಿದೆ. ಮೇಲಕ್ಕೆ ಬರಲಾಗದೇ ಅಸಹಾಯಕನಾದ ನಾಗರಾಜ ಬಾವಿಯೊಳಗೆ ಒದ್ದಾಡುತ್ತಿದ್ದರೆ ಇತ್ತ ಮಾಲಿಕ ಪೂಜಾರಿ ಮನೆಯವರು ಆತಂಕದಲ್ಲಿ ಕಣ್ಣೀರು ಹಾಕುತ್ತಿದ್ದರು.

ಮಾಹಿತಿ ಪಡೆದ ಉರಗ ಪ್ರೇಮಿ ಮುರಳೀಧರ ವಿಟ್ಲ ತನ್ನ ತಂಡದೊಂದಿಗೆ ತಕ್ಷಣವೇ ಸ್ಥಳಕ್ಕಾಗಮಿಸಿ ಹಗ್ಗದ ಸಹಾಯದಿಂದ ಬಾವಿಯೊಳಗೆ ಇಳಿದು ನಾಗರಾಜನನ್ನು ಮೇಲಕ್ಕೆತ್ತಿ ರಕ್ಷಿಸುವ ಮೂಲಕ ಆಪತ್ಭಾಂಧವನಾಗಿದ್ದಾರೆ. ಮುರಳೀಧರ ವಿಟ್ಲ ತಂಡದ ಸಮಾಜಮುಖಿ ಕಾರ್ಯ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದ್ದು ಇನ್ನಷ್ಟು ಕಾಲ ಆಪತ್ಭಾಂಧವನಾಗಿ ಸೇವೆ ಸಲ್ಲಿಸಲೆಂದು ಜನ ಹಾರೈಸಿದ್ದಾರೆ.

vtv vitla
vtv vitla
- Advertisement -

Related news

error: Content is protected !!