


ಹೊಸದಿಲ್ಲಿ: ಆರೋಪಿಯನ್ನು ಪೊಲೀಸರು ಅಧಿಕೃತವಾಗಿ ಬಂಧಿಸಿದ ಸಮಯದಿಂದಲ್ಲ, ಆತನ ಸ್ವಾತಂತ್ರ್ಯವನ್ನು ನಿರ್ಬಂಧಿಸಿ ವಶಕ್ಕೆ ಪಡೆದ ಕ್ಷಣದಿಂದಲೇ 24 ಗಂಟೆಗಳ ಅವಧಿ ಆರಂಭವಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಸಂವಿಧಾನದ 22(2)ನೇ ವಿಧಿಯ ಪ್ರಕಾರ, ವಶಕ್ಕೆ ಪಡೆದ ವ್ಯಕ್ತಿಯನ್ನು 24 ಗಂಟೆಗಳ ಒಳಗೆ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸುವುದು ಕಡ್ಡಾಯ. ಬಂಧನ ಮತ್ತು ವಶಕ್ಕೆ ಪಡೆಯುವಿಕೆ ನಡುವೆ ಕೃತಕ ವ್ಯತ್ಯಾಸ ಮಾಡಲು ಸಾಧ್ಯವಿಲ್ಲ. ಕೆಲವೇ ಕ್ಷಣಗಳಿಗೂ ವ್ಯಕ್ತಿಯ ಮೂಲಭೂತ ಹಕ್ಕುಗಳನ್ನು ನಿರಾಕರಿಸುವಂತಿಲ್ಲ ಎಂದು ನ್ಯಾಯಮೂರ್ತಿಗಳಾದ ಉಜ್ಜಲ್ ಭುಯಾನ್ ಮತ್ತು ಅತುಲ್ ಎಸ್. ಚಂದೂರ್ಕರ್ ಅವರ ಪೀಠ ಸ್ಪಷ್ಟಪಡಿಸಿದೆ.ಇನ್ನು ಮುಂದೆ ಆರೋಪಿಯನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸುವಾಗ ಪೊಲೀಸರು ವಶಕ್ಕೆ ಪಡೆದ ದಿನಾಂಕ ಮತ್ತು ಸಮಯವನ್ನು ದಾಖಲಿಸಬೇಕು. ಅಲ್ಲದೆ, ವಶಕ್ಕೆ ಪಡೆದ ಕ್ಷಣದಿಂದ 24 ಗಂಟೆಗಳ ಒಳಗೆ ಹಾಜರುಪಡಿಸಲಾಗಿದೆಯೇ ಎಂಬುದನ್ನು ಮ್ಯಾಜಿಸ್ಟ್ರೇಟ್ ಪರಿಶೀಲಿಸಬೇಕು ಎಂದು ಸೂಚಿಸಿದೆ.ತ್ರಿಪುರಾ ಹೈಕೋರ್ಟ್ ಜಾಮೀನು ನಿರಾಕರಿಸಿದ್ದನ್ನು ಪ್ರಶ್ನಿಸಿ ನಾಲ್ವರು ಆರೋಪಿಗಳು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ವೇಳೆ ಈ ತೀರ್ಪು ನೀಡಲಾಗಿದೆ. ಎನ್‌ಡಿಪಿಎಸ್ ಕಾಯ್ದೆಯ ಪ್ರಕರಣವೊಂದರಲ್ಲಿ 2025ರ ಸೆಪ್ಟೆಂಬರ್ 29ರಂದು ಮಧ್ಯಾಹ್ನ 2 ಗಂಟೆಗೆ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದರು.
ಆದರೆ, ಮರುದಿನ ಬೆಳಿಗ್ಗೆ 11 ಗಂಟೆಗೆ ಅಧಿಕೃತ ಬಂಧನ ದಾಖಲಿಸಿದ್ದರು.ವಶಕ್ಕೆ ಪಡೆದ ಸಮಯದಿಂದಲೇ 24 ಗಂಟೆಗಳ ಅವಧಿ ಆರಂಭವಾಗುವುದರಿಂದ, ಆರೋಪಿಗಳನ್ನು ನ್ಯಾಯಾಂಗದ ಮೇಲ್ವಿಚಾರಣೆಗೆ ಒಳಪಡಿಸುವಲ್ಲಿ ವಿಳಂಬವಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಸುಮಾರು 18 ಗಂಟೆಗಳ ಕಾಲ ನ್ಯಾಯಾಂಗದ ಮೇಲ್ವಿಚಾರಣೆಯಿಲ್ಲದೆ ವಶದಲ್ಲಿಟ್ಟಿರುವುದು ಸಂವಿಧಾನದ 22(2)ನೇ ವಿಧಿಯ ಉಲ್ಲಂಘನೆ ಎಂದು ಹೇಳಿ ನಾಲ್ವರು ಆರೋಪಿಗಳನ್ನು ತಕ್ಷಣ ಬಿಡುಗಡೆ ಮಾಡುವಂತೆ ಆದೇಶಿಸಿದೆ.ಬಂಧನದಲ್ಲಿರುವವರ ಮೇಲಿನ ಹಿಂಸಾಚಾರ ಘಟನೆಗಳನ್ನು ಗಮನದಲ್ಲಿಟ್ಟುಕೊಂಡು, ವ್ಯಕ್ತಿಯ ಸ್ವಾತಂತ್ರ್ಯವನ್ನು ನಿರ್ಬಂಧಿಸಿದ ಕ್ಷಣದಿಂದಲೇ ನ್ಯಾಯಾಂಗದ ಮೇಲ್ವಿಚಾರಣೆ ಅಗತ್ಯ ಎಂದು ಸುಪ್ರೀಂ ಕೋರ್ಟ್ ಹೇಳಿದೆ.ಅಲ್ಲದೆ, ಬಂಧನಕ್ಕೂ ಮುನ್ನ ವಶದಲ್ಲಿಟ್ಟಿದ್ದ ಅವಧಿಯನ್ನು 24 ಗಂಟೆಗಳ ಲೆಕ್ಕದಿಂದ ಹೊರಗಿಡಬಹುದು ಎಂಬ ಒಡಿಶಾ, ಕೇರಳ ಮತ್ತು ಮದ್ರಾಸ್ ಹೈಕೋರ್ಟ್‌ಗಳ ಹಿಂದಿನ ನಿಲುವುಗಳನ್ನು ಸುಪ್ರೀಂ ಕೋರ್ಟ್ ಒಪ್ಪಿಲ್ಲ. ಈ ಮೂಲಕ ವ್ಯಕ್ತಿಯ ಸ್ವಾತಂತ್ರ್ಯ ನಿರ್ಬಂಧಿಸಿದ ಕ್ಷಣದಿಂದಲೇ ನ್ಯಾಯಾಂಗದ ಮೇಲ್ವಿಚಾರಣೆ ಅಗತ್ಯ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಅಲ್ಲದೆ, ಬಂಧನಕ್ಕೂ ಮುನ್ನ ವಶದಲ್ಲಿಟ್ಟಿದ್ದ ಅವಧಿಯನ್ನು 24 ಗಂಟೆಗಳ ಲೆಕ್ಕದಿಂದ ಹೊರಗಿಡಬಹುದು ಎಂಬ ಒಡಿಶಾ, ಕೇರಳ ಮತ್ತು ಮದ್ರಾಸ್ ಹೈಕೋರ್ಟ್‌ಗಳ ಹಿಂದಿನ ನಿಲುವುಗಳನ್ನು ಸುಪ್ರೀಂ ಕೋರ್ಟ್ ಒಪ್ಪಿಲ್ಲ. ಈ ಮೂಲಕ ವ್ಯಕ್ತಿಯ ಸ್ವಾತಂತ್ರ್ಯ ನಿರ್ಬಂಧಿಸಿದ ಕ್ಷಣದಿಂದಲೇ 24 ಗಂಟೆಗಳ ಲೆಕ್ಕ ಆರಂಭವಾಗಬೇಕು ಎಂಬ ಕಾನೂನು ನಿಲುವನ್ನು ಸ್ಪಷ್ಟಪಡಿಸಿದೆ.








