Wednesday, October 28, 2026
spot_imgspot_img
spot_imgspot_img

ವಾಸ್ತುತಜ್ಞ ಬಾಬುರಾಯ ಆಚಾರ್ಯ ನಿಧನ

- Advertisement -
- Advertisement -

ಬಂಟ್ವಾಳ : ಕುಳ ಗ್ರಾಮದ ಅಳಕೆಮಜಲು ನಿವಾಸಿ ಬಾಬುರಾಯ ಆಚಾರ್ಯ (75) ರವರು ಬುಧವಾರ ಸಂಜೆ ಹೃದಯಾಘಾತದಿಂದ ನಿಧನ ಹೊಂದಿದರು.ವಾಸ್ತುತಜ್ಞರಾಗಿದ್ದ ಇವರು ಹಲವು ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು.

ಮಂಗಳೂರು ಕಾಳಿಕಾಂಬಾ ದೇವಸ್ಥಾನದ ಅಳಕೆ ಮಜಲು ಕೂಡುವಳಿಕೆ ಮುಕ್ತೇಸರರಾಗಿದ್ದ ಇವರು, ಅಳಕೆಮಜಲು ಕುಟುಂಬದ ಹಿರಿಯರಾಗಿದ್ದರು. ಸ್ಥಳೀಯ ಹಲವು ಧಾರ್ಮಿಕ ಸಂಘ ಸಂಸ್ಥೆಗಳಲ್ಲಿಯೂ ಸಕ್ರೀಯರಾಗಿದ್ದ ಇವರು, ಸ್ಥಳೀಯವಾಗಿ ತಮ್ಮ ಸರಳ, ಸ್ನೇಹಮಯಿ ವ್ಯಕ್ತಿತ್ವದಿಂದ ಜನಾನುರಾಗಿಗಳಾಗಿದ್ದರು.

ಮೃತರು ಪುತ್ರ, ಸೊಸೆ, ಪುತ್ರಿ, ಅಳಿಯ ಸೇರಿದಂತೆ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ. ಇಂದು ಅಂತ್ಯಕ್ರಿಯೆಮೃತರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಗುರುವಾರ ಬೆಳಿಗ್ಗೆ 10 ಗಂಟೆಗೆ ಉರಿಮಜಲು ಕಾರ್ಯಾಡಿ ರುದ್ರಭೂಮಿಯಲ್ಲಿ ನಡೆಯಲಿದೆ ಎಂದು ಕುಟುಂಬಿಕರು ತಿಳಿಸಿದ್ದಾರೆ.

- Advertisement -

Related news

error: Content is protected !!