- Advertisement -
- Advertisement -
ವರದಿ: ನ್ಯೂಸ್ ಡೆಸ್ಕ್, ವಿ ಟಿವಿ
ಮಹಾಮಾರಿ ಕೊರೊನಾ ವೈರಸ್ ರಣಕೇಕೆ ಹಾಕುತ್ತಿದೆ. ಸೋಂಕಿತರ ಸಂಖ್ಯೆಯೊಂದಿಗೆ ಸಾವಿನ ಸಂಖ್ಯೆ ಕೂಡ ದಿನೇ-ದಿನೇ ಹೆಚ್ಚಾಗುತ್ತಿವೆ. ಈ ನಡುವೆ ಕೊರೊನಾಗೆ ಬಲಿಯಾದವರ ಪೈಕಿ ಶೇ.85 ರಷ್ಟು 45 ವರ್ಷ ಮೇಲ್ಪಟ್ಟವರೇ ಹೆಚ್ಚು ಎಂದು ಆರೋಗ್ಯ ಸಚಿವಾಲಯ ವರದಿ ನೀಡಿದೆ.
ದೇಶದಲ್ಲಿ 45 ವರ್ಷ ಮೇಲ್ಪಟ್ಟವರು ಶೇ.25 ರಷ್ಟಿದ್ದಾರೆ. ಕೊರೊನಾ ವೈರಸ್ ಇವರನ್ನೇ ಟಾರ್ಗೆಟ್ ಮಾಡ್ತಿದೆ. ಹೀಗಾಗಿ ಹೆಚ್ಚಿನ ಅಪಾಯದ ಜನಸಂಖ್ಯೆಯ ಗುಂಪಿನ ಕಡೆಗೆ ಸರ್ಕಾರಗಳು ವಿಶೇಷ ಗಮನ ಹರಿಸಬೇಕು ಎಂದು ಕೇಂದ್ರ ಆರೋಗ್ಯ ಸಚಿವಾಲಯದ ವಿಶೇಷ ಕರ್ತವ್ಯ ಅಧಿಕಾರಿ ರಾಜೇಶ್ ಭೂಷಣೆ ತಿಳಿಸಿದ್ದಾರೆ.
ಕೊರೊನಾಗೆ ಬಲಿಯಾದವರ ಸರಾಸರಿ ವಯೋಮಿತಿ:
*14 ವರ್ಷ ಒಳಗಿನವರು ಶೇ.1
*15-25 ವರ್ಷ ಒಳಗಿನವರು ಶೇ.3
*30-44 ವರ್ಷ ಒಳಗಿನವರು ಶೇ.11
*45-59 ಒಳಗಿನವರು ವರ್ಷ ಶೇ.32
*60-70 ವರ್ಷ ಒಳಗನಿವರು ಶೇ.39
*70 ವರ್ಷ ಮೇಲ್ಪಟ್ಟವರು ಶೇ.14
- Advertisement -