Sunday, November 8, 2026
spot_imgspot_img
spot_imgspot_img

ನ.10ರಂದು ಮೊಗರ್ನಾಡು ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನದ ನೂತನ ಗರ್ಭಗುಡಿಯ ಷಡಾಧಾರ ಪ್ರತಿಷ್ಠೆ

- Advertisement -
- Advertisement -

ಬಂಟ್ವಾಳ: ಮೊಗರ್ನಾಡು ಸಾವಿರ ಸೀಮೆಯ ಕಡೇಶ್ವಾಲ್ಯದಲ್ಲಿರುವ ಮಹತೋಭಾರ ಚಿಂತಾಮಣಿ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನದ ಭವ್ಯ ದೇವಾಲಯದ ನೂತನ ಗರ್ಭಗುಡಿಯ ಷಡಾಧಾರ ಪ್ರತಿಷ್ಠೆ ಕಾರ್ಯಕ್ರಮ ನ.10ರಂದು ಮಂಗಳವಾರ ನಡೆಯಲಿದೆ.

ಕ್ಷೇತ್ರ ತಂತ್ರಿಗಳಾದ ಬ್ರಹ್ಮಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಹಾಗೂ ದೇವಸ್ಥಾನದ ಅರ್ಚಕ ವೃಂದದವರ ಸಹಕಾರದೊಂದಿಗೆ ಬೆಳಿಗ್ಗೆ 11.12ರ ಶುಭ ಮುಹೂರ್ತದಲ್ಲಿ ಆಧಾರಶಿಲೆ, ನಿಧಿಕುಂಭಾದಿಗಳನ್ನೊಳಗೊಂಡ ಷಡಾಧಾರ ಪ್ರತಿಷ್ಠೆ ನೆರವೇರಲಿದೆ.

ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದಂಗಳವರು ಹಾಗೂ ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ಉಪಸ್ಥಿತರಿದ್ದು ಆಶೀರ್ವಚನ ನೀಡಲಿದ್ದಾರೆ. ಉಳಿ ಬಂಟ್ವಾಳದ ಡಾ. ಯೋಗಿಂದ್ರ ಭಟ್ ಧಾರ್ಮಿಕ ಪ್ರವಚನ ನೀಡಲಿದ್ದಾರೆ.
ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕುಸುಮೋದರ ಡಿ. ಶೆಟ್ಟಿ ನಡುಮೊಗರುಗುತ್ತು ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ ಉಳಿಪಾಡಿಗುತ್ತು, ಮಾಜಿ ಸಚಿವ ಬಿ. ರಮಾನಾಥ ರೈ, ಬಂಟ್ಸ್ ಸಂಘ ಪುಣೆ ಅಧ್ಯಕ್ಷ ಅಜಿತ್ ಕೆ. ಹೆಗ್ಡೆ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.
ಬೆಳಿಗ್ಗೆ 8.20ಕ್ಕೆ ಪ್ರಾರ್ಥನೆ, 8.30ಕ್ಕೆ ಗಣಹೋಮ ಹಾಗೂ ಪುಣ್ಯಾಹ ಶುದ್ಧಿ ನಡೆಯಲಿದ್ದು, ಮಧ್ಯಾಹ್ನ 1 ಗಂಟೆಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ.

ಸಂಜೆ 6.48ರಿಂದ ಇಷ್ಟಿಕಾನ್ಯಾಸ, ವಾಸ್ತುಬಲಿ ಹಾಗೂ ಗರ್ಭಪಾತ್ರಾ ಪೂರಣ ನಡೆಯಲಿದ್ದು, ರಾತ್ರಿ 8.28ಕ್ಕೆ ಗರ್ಭಪಾತ್ರನ್ಯಾಸ ನೆರವೇರಲಿದೆ. ಬಳಿಕ ಅನ್ನಸಂತರ್ಪಣೆ ನಡೆಯಲಿದೆ.


ಮೊಗರ್ನಾಡು ಸಾವಿರ ಸೀಮೆಯ ಒಂಬತ್ತು ಗ್ರಾಮಗಳ ಭಕ್ತಾದಿಗಳು ಸೇರಿದಂತೆ ಗ್ರಾಮದ ಹಾಗೂ ಪರವೂರಿನ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ದೇವರ ಕೃಪೆಗೆ ಪಾತ್ರರಾಗುವಂತೆ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಹಾಗೂ ಜೀರ್ಣೋದ್ಧಾರ ಸಮಿತಿ ವಿನಂತಿಸಿದೆ.

- Advertisement -

Related news

error: Content is protected !!