Monday, September 7, 2026
spot_imgspot_img
spot_imgspot_img

ರನ್‌ವೇಯಿಂದ ಜಾರಿ ವಾಹನಗಳಿಗೆ ಡಿಕ್ಕಿಹೊಡೆದ ಕಾರ್ಗೋ ಜೆಟ್ – ಐವರು ಮೃತ್ಯು

- Advertisement -
- Advertisement -

ವಾಷಿಂಗ್ಟನ್‌: ಅಮೆರಿಕದ ಮಿಯಾಮಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್‌ ವೇಳೆ ಅಮೆಜಾನ್ ಪ್ರೈಮ್ ಏರ್ ಕಾರ್ಗೋ ಜೆಟ್ ರನ್‌ವೇಯಿಂದ ಜಾರಿ ಪಾರ್ಕ್‌ ಮಾಡಿದ್ದ ವಾಹನಗಳಿಗೆ ಡಿಕ್ಕಿಯಾಗಿದ್ದು, ಈ ಅವಘಡದಲ್ಲಿ ಕನಿಷ್ಠ ಐವರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ವಿಮಾನವು ಭಾನುವಾರ(ಸೆ.06) ಮಧ್ಯಾಹ್ನ 2 ಗಂಟೆಯ ಸುಮಾರಿಗೆ ET(1800 GMT) ಲ್ಯಾಂಡ್ ಆಗಿತ್ತು. ಈ ವೇಳೆ ರನ್‌ವೇಯಿಂದ ಜಾರಿ ಹಲವು ವಾಹನಗಳಿಗೆ ಡಿಕ್ಕಿ ಹೊಡೆದು ಹೊತ್ತಿ ಉರಿದಿದೆ. ಈ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ದಟ್ಟವಾದ ಹೊಗೆ ಏಳುವುದು ಸೆರೆಯಾಗಿದೆ.‌

ಬೋಯಿಂಗ್ 767-300 ವಿಮಾನ ಇದಾಗಿದ್ದು, ಪೋರ್ಟೊ ರಿಕೊದ ಸ್ಯಾನ್ ಜುವಾನ್‌ನಿಂದ ಮಿಯಾಮಿಗೆ ಆಗಮಿಸಿತ್ತು. ವಿಮಾನ ಅಪಘಾತದ ನಂತರ ಎಲ್ಲಾ ರನ್‌ವೇಗಳು ಮತ್ತು ಟ್ಯಾಕ್ಸಿವೇಗಳನ್ನು ಕೆಲಕಾಲ ಮುಚ್ಚಲಾಗಿತ್ತು.

ಕೂಡಲೇ ರಕ್ಷಣಾ ತಂಡಗಳು ವಿಮಾನಕ್ಕೆ ಹೊತ್ತಿದ್ದ ಬೆಂಕಿಯನ್ನು ಆರಿಸಿದ್ದಾರೆ. ಫೆಡರಲ್ ಏವಿಯೇಷನ್ ​​ಅಡ್ಮಿನಿಸ್ಟ್ರೇಷನ್ ಅಪಘಾತದ ಬಗ್ಗೆ ತನಿಖೆ ನಡೆಸಿದ್ದು, ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿ ಸಹ ಈ ಅಪಘಾತದ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದೆ ಎಂದು ತಿಳಿದುಬಂದಿದೆ.

- Advertisement -

Related news

error: Content is protected !!