
ಮಂಗಳೂರು: ಶಿಕ್ಷಕರ ದಿನಾಚರಣೆಯ ಅಂಗವಾಗಿ ನೀಡಲಾಗುವ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಶಿಕ್ಷಕರ ಪಟ್ಟಿಯನ್ನು ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರು (ಆಡಳಿತ) ಪ್ರಕಟಿಸಿದ್ದಾರೆ.ಕಿರಿಯ ಪ್ರಾಥಮಿಕ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗಗಳಲ್ಲಿ ತಲಾ ಏಳು ಶಿಕ್ಷಕರಂತೆ ಒಟ್ಟು 21 ಶಿಕ್ಷಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಸೆ.5ರಂದು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
ಕಿರಿಯ ಪ್ರಾಥಮಿಕ ವಿಭಾಗ: ಬಂಟ್ವಾಳ ತಾಲೂಕಿನ ಸೇರ್ಕಳ ಶಾಲೆಯ ಸಹಶಿಕ್ಷಕ ದಾಮೋದರ, ಬೆಳ್ತಂಗಡಿಯ ಮುಂಡ್ರುಪಾಡಿ ಶಾಲೆಯ ಸಹಶಿಕ್ಷಕಿ ಚಿತ್ರಪ್ರಭಾ, ಮಂಗಳೂರು ಉತ್ತರ ವಲಯದ ಸ್ಯಾಂಡ್‌ಪೀಟ್ ಶಾಲೆಯ ಸಹಶಿಕ್ಷಕಿ ಉಮಾಲಕ್ಷ್ಮಿ, ಮಂಗಳೂರು ದಕ್ಷಿಣ ವಲಯದ ಬದ್ರಿಯಾನಗರ ಶಾಲೆಯ ಸಹಶಿಕ್ಷಕಿ ಪ್ಲೇವಿ ಜೆಸಿಂತ ಮಿರಾಂದ, ಮೂಡುಬಿದಿರೆ ತಾಲೂಕಿನ ಪೆಂಜಾರಿನ ಸಹಶಿಕ್ಷಕಿ ಶ್ರೀವಾಣಿ, ಪುತ್ತೂರು ತಾಲೂಕಿನ ಹೊಸ್ತೋಟ ಶಾಲೆಯ ಸಹಶಿಕ್ಷಕಿ ಮಾಲತಿ ಹಾಗೂ ಸುಳ್ಯ ತಾಲೂಕಿನ ಪಾಂಡಿಗದ್ದೆ ಶಾಲೆಯ ಸಹಶಿಕ್ಷಕ ಯಶೋಧರ.
ಹಿರಿಯ ಪ್ರಾಥಮಿಕ ವಿಭಾಗ: ಬಂಟ್ವಾಳ ತಾಲೂಕಿನ ವಿಟ್ಲ ಪಿಎಂಶ್ರೀ ಶಾಲೆಯ ಸಹಶಿಕ್ಷಕ ವಿದ್ಯಾಶಂಕರ್ ಡಿ., ಬೆಳ್ತಂಗಡಿ ತಾಲೂಕಿನ ಅಂಡೆತಡ್ಕ ಶಾಲೆಯ ಮುಖ್ಯಶಿಕ್ಷಕ ಕೃಷ್ಣಪ್ಪ ಪೂಜಾರಿ, ಮಂಗಳೂರು ಉತ್ತರ ವಲಯದ ಕಾಟಿಪಳ್ಳ ಶಾಲೆಯ ಸಹಶಿಕ್ಷಕಿ ಇಂದಿರಾ ಎಸ್., ಮಂಗಳೂರು ದಕ್ಷಿಣ ವಲಯದ ಉಚ್ಚಿಲಗುಡ್ಡೆಯ ಹರೀಶ್ ಕುಮಾರ್ ಬಿ.ಎಂ. ಹಾಗೂ ಪುತ್ತೂರು ತಾಲೂಕಿನ ಸಾಮೆತ್ತಡ್ಕ ಶಾಲೆಯ ಸಹಶಿಕ್ಷಕಿ ಭುವನೇಶ್ವರಿ ಕೆ.
ಪ್ರೌಢಶಾಲಾ ವಿಭಾಗ: ಬಂಟ್ವಾಳ ತಾಲೂಕಿನ ಮಂಚಿ ಕೊಳ್ಳಾಡು ಸರ್ಕಾರಿ ಪ್ರೌಢಶಾಲೆಯ ಸಹಶಿಕ್ಷಕಿ ವಿಜಯಲಕ್ಷ್ಮಿ, ಬೆಳ್ತಂಗಡಿ ತಾಲೂಕಿನ ವೇಣೂರು ಪ್ರೌಢಶಾಲೆಯ ಸಹಶಿಕ್ಷಕ ರವೀಂದ್ರ ಕೆ., ಮಂಗಳೂರು ಉತ್ತರ ವಲಯದ ಸಂತ ಅಲೋಶಿಯಸ್ ಪ್ರೌಢಶಾಲಾ ವಿಭಾಗದ ಸಹಶಿಕ್ಷಕ ಪ್ರವೀಣ್ ಕುಟಿನ್ಹೋ, ಮಂಗಳೂರು ದಕ್ಷಿಣ ವಲಯದ ಮುಚೂರು ಪ್ರೌಢಶಾಲೆಯ ದೈಹಿಕ ಶಿಕ್ಷಕ ಕಿಶೋರ್, ಮೂಡುಬಿದಿರೆಯ ಮೂಡುಮಾರ್ನಾಡು ಸರ್ಕಾರಿ ಪ್ರೌಢಶಾಲೆಯ ಸಹಶಿಕ್ಷಕ ಜಾನ್ ರೊನಾಲ್ಡ್ ಡಿಸೋಜ, ಪುತ್ತೂರು ತಾಲೂಕಿನ ನೆಲ್ಯಾಡಿ ಸಂತ ಜಾರ್ಜ್ ಪ್ರೌಢಶಾಲೆಯ ಸಹಶಿಕ್ಷಕ ಥಾಮಸ್ ಎಂ.ಐ. ಹಾಗೂ ಸುಳ್ಯ ತಾಲೂಕಿನ ಸರ್ಕಾರಿ ಪ್ರೌಢಶಾಲೆಯ ಸಹಶಿಕ್ಷಕ ಕಿಶೋರ್ ಕುಮಾರ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.








