ಮಂಗಳೂರು, ಮಾ.5:ಲಯನ್ಸ್ ಕ್ಲಬ್ ಇಂಟರ್ನ್ಯಾಷನಲ್ ಡಿಸ್ಟ್ರಿಕ್ಟ್ 317D ವತಿಯಿಂದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ವಾರಪೂರ್ತಿ ಕಾರ್ಯಕ್ರಮಗಳ ಅಂಗವಾಗಿ ಮಾರ್ಚ್ 3ರಂದು ನಗರದ ಕೆನರಾ ಕಾಲೇಜ್ ನಲ್ಲಿ ಸ್ವಯಂರಕ್ಷಣಾ ತರಬೇತಿ ಕಾರ್ಯಾಗಾರ ಆಯೋಜಿಸಲಾಯಿತು.

ಕಾರ್ಯಕ್ರಮವನ್ನು ಜಿಲ್ಲಾ ಗವರ್ನರ್ ಕುಡ್ಪಿ ಅರವಿಂದ್ ಶೆಣೈ ಉದ್ಘಾಟಿಸಿದರು. ಮುಖ್ಯ ಸಂಯೋಜಕಿ ವಾಣಿ ವಿ. ಆಳ್ವ ಸ್ವಾಗತಿಸಿ ಕಾರ್ಯಕ್ರಮದ ಉದ್ದೇಶವನ್ನು ವಿವರಿಸಿದರು. ಸಹ ಸಂಯೋಜಕರು, ಜಿಲ್ಲಾ ಅಧ್ಯಕ್ಷರು, ಕಾಲೇಜಿನ ಪ್ರಾಂಶುಪಾಲರು ಹಾಗೂ ಉಪನ್ಯಾಸಕರು ಉಪಸ್ಥಿತರಿದ್ದರು.
Swaraksha for Women Trust ಸಂಸ್ಥಾಪಕರಾದ ಖ್ಯಾತ ತರಬೇತುದಾರ ಕಾರ್ತಿಕ್ ಎಸ್. ಕಟೀಲ್ ಅವರು ದೇಶಾದ್ಯಂತ 2,16,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಮಹಿಳೆಯರಿಗೆ ಸ್ವಯಂರಕ್ಷಣಾ ತರಬೇತಿ ನೀಡಿರುವುದು ವಿಶೇಷ. “ಪ್ರತಿಸ್ಪರ್ಧಿಯನ್ನು ಒಪ್ಪಿಕೊಳ್ಳಬೇಡಿ, ಅವನನ್ನು ಸ್ತಂಭಗೊಳಿಸಿ” ಎಂಬ ತಮ್ಮ ಘೋಷವಾಕ್ಯದೊಂದಿಗೆ ವಿದ್ಯಾರ್ಥಿನಿಯರಿಗೆ ಪ್ರಾಯೋಗಿಕ ತರಬೇತಿ ನೀಡಿದರು.
ಅವರ ತಾಯಿಯವರೂ ತರಬೇತಿಯಲ್ಲಿ ಸಹಕರಿಸಿದರು.ಕಾರ್ಯಕ್ರಮವು ವಿದ್ಯಾರ್ಥಿನಿಯರ ಉತ್ತಮ ಸ್ಪಂದನೆಗೆ ಪಾತ್ರವಾಯಿತು ಎಂದು ಮುಖ್ಯ ಸಂಯೋಜಕಿ ವಾಣಿ ವಿ. ಅಳ್ವಾ ತಿಳಿಸಿದ್ದಾರೆ.ಈ ಕುರಿತು ಲಯನ್ಸ್ ಜಿಲ್ಲೆ ಜಿಲ್ಲಾ ಸಂಪರ್ಕ ಅಧಿಕಾರಿ ಸುದರ್ಶನ್ ಪಡಿಯರ್ ವಿಟ್ಲ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.








