Friday, September 11, 2026
spot_imgspot_img
spot_imgspot_img

ಪುತ್ತೂರು ಬೈಪಾಸ್ ರಸ್ತೆಯಲ್ಲಿ ಇಂದು ಬೆಳ್ಳಂಬೆಳಗ್ಗೆ ಕಾಡುಕೋಣಗಳು (ಕಾಟಿ) ಪ್ರತ್ಯಕ್ಷ

- Advertisement -
- Advertisement -

ಪುತ್ತೂರು, ಸೆ.11: ಪುತ್ತೂರು ಬೈಪಾಸ್ ರಸ್ತೆಯಲ್ಲಿ ಇಂದು ಬೆಳ್ಳಂಬೆಳಗ್ಗೆ ಎರಡು ಕಾಡುಕೋಣಗಳು ಪ್ರತ್ಯಕ್ಷಗೊಂಡಿದ್ದು, ಕೆಲಕಾಲ ಭಯದ ವಾತಾವರಣ ನಿರ್ಮಾಣವಾಗಿದೆ.ಬೈಪಾಸ್ ರಸ್ತೆಯ ದುಗ್ಗಮ್ಮ–ದೇರಣ್ಣ ಹಾಲ್ ಸಮೀಪ ಎರಡು ಕಾಡುಕೋಣಗಳು ರಸ್ತೆಗೆ ಅಡ್ಡವಾಗಿ ನಿಂತು ರಾಜಾರೋಷವಾಗಿ ಸಂಚರಿಸಿರುವುದು ಕಂಡುಬಂದಿದೆ.

ಈ ದೃಶ್ಯವನ್ನು ಗಮನಿಸಿದ ಕೌಡಿಚ್ಚಾರು ಮೂಲದ ಮುಂಬೈ ಉದ್ಯಮಿಯೊಬ್ಬರು ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.

ಮಾಣಿ-ಮೈಸೂರು ರಾಜ್ಯ ಹೆದ್ದಾರಿಯಲ್ಲಿ ವಾಹನಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸಂಚರಿಸುವ ಪ್ರದೇಶದಲ್ಲೇ ಕಾಡುಕೋಣಗಳು ಕಾಣಿಸಿಕೊಂಡಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.ಕಾಡುಕೋಣಗಳು ಜನವಸತಿ ಹಾಗೂ ವಾಹನ ಸಂಚಾರದ ಪ್ರದೇಶಕ್ಕೆ ಆಗಮಿಸಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಕೂಡಲೇ ಕಾರ್ಯಪ್ರವೃತ್ತರಾಗಿ ಅವುಗಳನ್ನು ಸುರಕ್ಷಿತವಾಗಿ ಕಾಡಿಗೆ ಹಿಮ್ಮೆಟ್ಟಿಸುವ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

- Advertisement -

Related news

error: Content is protected !!