Wednesday, September 16, 2026
spot_imgspot_img
spot_imgspot_img

ಬೈಕ್ ತಡೆದು ಹಲ್ಲೆ, ಬೆದರಿಕೆ ಆರೋಪ: ಉಪ್ಪಿನಂಗಡಿ ಠಾಣೆಯಲ್ಲಿ ದೂರು

- Advertisement -
- Advertisement -

ನೆಲ್ಯಾಡಿ: ಬೈಕನ್ನು ಅಕ್ರಮವಾಗಿ ತಡೆದು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಕಡಬ ತಾಲೂಕಿನ ಕೌಕ್ರಾಡಿ ನಿವಾಸಿ ಹರೀಶ್ ಗೌಡ ಎಂಬವರು ನೀಡಿದ ದೂರಿನಂತೆ ಐವರ ವಿರುದ್ಧ ಉಪ್ಪಿನಂಗಡಿ ಪೊಲೀಸ್‌ ಠಾಣೆಯಲ್ಲಿ ಕೇಸು ದಾಖಲಾಗಿದೆ.

ಸೆ.11ರಂದು ರಾತ್ರಿ ಕೌಕ್ರಾಡಿ ಗ್ರಾಮದ ಸೌತ್ತಡ್ಕ ದೇವಸ್ಥಾನ ಕ್ರಾಸ್ ಬಳಿ ಆರೋಪಿತರಾದ ಬಾಬು, ಜಯರಾಮ, ರಮೇಶ್, ಪ್ರಣಾಮ್, ಶ್ರೇಯಸ್‌ ಎಂಬವರು ಪೂರ್ವ ದ್ವೇಷದಿಂದ ಬೈಕ್ ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿ ಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಿ ದೂರು ನೀಡಲಾಗಿದೆ.

ಹಲ್ಲೆಯಿಂದ ಗಾಯಗೊಂಡಿರುವ ಹರೀಶ್‌ ಗೌಡ ಅವರು ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

- Advertisement -

Related news

error: Content is protected !!