Thursday, April 25, 2024
spot_imgspot_img
spot_imgspot_img

5 ಮತ್ತು 8ನೇ ತರಗತಿ ಪಬ್ಲಿಕ್‌ ಪರೀಕ್ಷೆ ವೇಳಾಪಟ್ಟಿ ಪ್ರಕಟ

- Advertisement -G L Acharya panikkar
- Advertisement -

ಬೆಂಗಳೂರು: 2022-23ನೇ ಸಾಲಿನ ರಾಜ್ಯ ಪಠ್ಯಕ್ರಮದ ಎಲ್ಲಾ ಶಾಲೆಗಳಲ್ಲಿ 5 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ಮೌಲ್ಯಾಂಕನ ಪರೀಕ್ಷೆ ನಡೆಸಲು ಕರ್ನಾಟಕ ಶಾಲಾ ಪರೀಕ್ಷೆ ಮೌಲ್ಯನಿರ್ಣಯ ಮಂಡಳಿ ವೇಳಾಪಟ್ಟಿ ಪ್ರಕಟ ಮಾಡಿದೆ. ಕರ್ನಾಟಕ ಶಾಲಾ ಗುಣಮಟ್ಟ ಮೌಲ್ಯಾಂಕನ ಮತ್ತು ಅಂಗೀಕರಣ ಪರಿಷತ್​ನಿಂದ ವೇಳಾಪಟ್ಟಿ ಪ್ರಕಟಿಸಲಾಗಿದ್ದು, 5ನೇ ತರಗತಿ ವಿದ್ಯಾರ್ಥಿಗಳಿಗೆ ಮಾ. 27 ರಿಂದ ಮಾ.30 ಮತ್ತು8ನೇ ತರಗತಿ ವಿದ್ಯಾರ್ಥಿಗಳಿಗೆ ಮಾ. 27ರಿಂದ ಏ. 1ರವರೆಗೆ ಬೋರ್ಡ್​ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ.

ಇನ್ನು 5 ಮತ್ತು 8ನೇ ತರಗತಿ ಬೋರ್ಡ್ ಪರೀಕ್ಷೆ ನಡೆಸಲು ಅನುಮತಿ ನೀಡಿ ಕರ್ನಾಟಕ ಹೈಕೋರ್ಟ್ ಬುಧವಾರ ತೀರ್ಪು ನೀಡಿದೆ. ಬೋರ್ಡ್ ಪರೀಕ್ಷೆ ನಡೆಸಲು ಶಿಕ್ಷಣ ಕಾಯ್ದೆಯಡಿ ನಿರ್ಬಂಧವಿಲ್ಲ ಎಂದಿರುವ ಹೈಕೋರ್ಟ್ ವಿಭಾಗೀಯ ಪೀಠ, ಈ ಹಿಂದೆ ಏಕಸದಸ್ಯ ಪೀಠ ನೀಡಿದ್ದ ಆದೇಶಕ್ಕೆ ತಡೆ ನೀಡಿದೆ. ಮಾರ್ಚ್ 27ರಿಂದ ಪರೀಕ್ಷೆ ನಡೆಸುವಂತೆ ಸರ್ಕಾರಕ್ಕೆ ವಿಭಾಗೀಯ ಪೀಠ ಸೂಚನೆ ನೀಡಿತ್ತು.

5ನೇ ತರಗತಿ ವೇಳಾಪಟ್ಟಿ
ಮಾರ್ಚ್ 27 ಸೋಮವಾರ- ಪ್ರಥಮ ಭಾಷೆ, ಕನ್ನಡ, ಇಂಗ್ಲಿಷ್​, ಹಿಂದಿ, ಉರ್ದು, ಮರಾಠಿ, ತೆಲಗು, ತಮಿಳು.
ಮಾರ್ಚ್ 28 ಮಂಗಳವಾರ- ದ್ವಿತೀಯ ಭಾಷೆ, ಇಂಗ್ಲಿಷ್​​, ಕನ್ನಡ.
ಮಾರ್ಚ್ 29 ಬುಧವಾರ- ಕೋರ್​ ವಿಷಯ, ಪರಿಸರ ಅಧ್ಯಯನ.
ಮಾರ್ಚ್ 30 ಗುರುವಾರ- ಕೋರ್​ ವಿಷಯ, ಗಣಿತ.

8ನೇ ತರಗತಿ ವೇಳಾಪಟ್ಟಿ
ಮಾರ್ಚ್ 27 ಸೋಮವಾರ- ಕನ್ನಡ, ಇಂಗ್ಲಿಷ್, ಇಂಗ್ಲಿಷ್ (NCERT), ಹಿಂದಿ, ಉರ್ದು, ಮರಾಠಿ, ತೆಲಗು, ತಮಿಳು, ಸಂಸ್ಕೃತ.
ಮಾರ್ಚ್ 28 ಮಂಗಳವಾರ- ದ್ವಿತೀಯ ಭಾಷೆ, ಇಂಗ್ಲಿಷ್​​, ಕನ್ನಡ.
ಮಾರ್ಚ್ 29 ಬುಧವಾರ- ಹಿಂದಿ, ಹಿಂದಿ (NCERT), ಕನ್ನಡ, ಇಂಗ್ಲಿಷ್​, ಅರೇಬಿಕ್​, ಪರ್ಪಿಯನ್​ಉರ್ದು, ಸಂಸ್ಕೃತ, ಕೊಂಕಣಿ, ತುಳು.
ಮಾರ್ಚ್ 30 ಗುರುವಾರ- ಕೋರ್​ ವಿಷಯ, ಗಣಿತ.
ಮಾರ್ಚ್ 31 ಶುಕ್ರವಾರ- ಕೋರ್​ ವಿಷಯ, ವಿಜ್ಞಾನ.
ಏಪ್ರಿಲ್​ 01 ಶನಿವಾರ- ಕೋರ್​ ವಿಷಯ, ಸಮಾಜ ವಿಜ್ಞಾನ.

- Advertisement -

Related news

error: Content is protected !!