Sunday, April 28, 2024
spot_imgspot_img
spot_imgspot_img

ಒಂದು ತಿಂಗಳಲ್ಲಿ ಐದು ವಿದ್ಯಾರ್ಥಿಗಳು ಆತ್ಮಹತ್ಯೆ..!? ವಿದ್ಯಾಸಂಸ್ಥೆಯಲ್ಲಿ ನಡೆಯುತ್ತಿರುವ ಆತಂಕಕಾರಿ ಬೆಳವಣಿಗೆಯಿಂದ ಪೋಷಕರು ಕಂಗಾಲು

- Advertisement -G L Acharya panikkar
- Advertisement -

ಒಂದೇ ವಿದ್ಯಾಸಂಸ್ಥೆಯಲ್ಲಿ ಒಂದು ತಿಂಗಳಲ್ಲಿ ಐವರು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡ ಆತಂಕಕಾರಿ ವಿಷಯ ಹೊರಬಿದ್ದಿದೆ. ರಾಜಸ್ಥಾನದ ಕೋಟಾದ ಅಲೆನ್ ಇನ್‌ಸ್ಟಿಟ್ಯೂಟ್‌ನಲ್ಲಿ ಈ ಘಟನೆ ನಡೆದಿದೆ. ಆತ್ಮಹತ್ಯೆ ಪ್ರಕರಣದಲ್ಲಿ ವಿದ್ಯಾರ್ಥಿಗಳ ಡೆತ್‌ನೋಟ್‌ಗಳನ್ನು ಪೊಲೀಸರು ಬಚ್ಚಿಟ್ಟಿದ್ದಾರೆ ಎಂದು ಮೃತರ ಸಂಬಂಧಿಕರು ಆರೋಪಿಸಿದ್ದಾರೆ.

ವಿದ್ಯಾರ್ಥಿಗಳು ನಿಜಕ್ಕೂ ಸ್ವಯಂ ನಿರ್ಣಯದಿಂದ ಇಂತಹ ಕಠಿಣ ನಿರ್ಧಾರ ತೆಗೆದುಕೊಂಡರೋ ಅಥವಾ ಅಧ್ಯಯನಕ್ಕೆ ಸಂಬಂಧಿಸಿದಂತೆ ಅವರು ಸಂಸ್ಥೆಯಿಂದ ಒತ್ತಡವನ್ನು ಎದುರಿಸಿದ್ದಾರೆಯೇ ಎಂದು ಸಂಬಂಧಿಕರು ತಿಳಿದುಕೊಳ್ಳಲು ಬಯಸಿದ್ದಾರೆ. ಪದೇ ಪದೇ ಆತ್ಮಹತ್ಯೆ ಪ್ರಕರಣಗಳು ಜರುಗುತ್ತಿದ್ದರೂ ಸಂಸ್ಥೆಯ ಆಡಳಿತ ಮಂಡಳಿ ಏಕೆ ಕಾಳಜಿ ವಹಿಸುತ್ತಿಲ್ಲ ಎಂದು ಪೋಷಕರು ಪ್ರಶ್ನಿಸಿದ್ದಾರೆ. ಆಡಳಿತ ಮಂಡಳಿಯು ಸಕಾಲದಲ್ಲಿ ಕ್ರಮ ಕೈಗೊಂಡು ಸಂಸ್ಥೆಯಲ್ಲಿ ಏನು ಕೊರತೆ ಇದೆ ಎಂಬುದನ್ನು ಪರಿಶೀಲಿಸಿದ್ದರೆ ವಿದ್ಯಾರ್ಥಿಗಳು ಆತ್ಮಹತ್ಯೆಯ ಯೋಚನೆ ಕೂಡ ಮಾಡುತ್ತಿರಲಿಲ್ಲ ಎಂದು ವಾದಿಸಿದರು

5 ಆತ್ಮಹತ್ಯೆ ಪ್ರಕರಣಗಳೆಂದು ಹೇಳಲಾಗಿದೆ, ಆದರೆ ನಿಜಕ್ಕೂ ಇನ್ನೂ ಹೆಚ್ಚಿನ ಆತ್ಮಹತ್ಯೆಗಳು ನಡೆದಿರಬಹುದು. ಶಿಕ್ಷಣ ಸಂಸ್ಥೆಯು ನಿಖರ ಸಂಖ್ಯೆಯನ್ನು ಬಚ್ಚಿಟ್ಟಿರಬಹುದೆಂದು ಪಾಲಕರು ಆಕ್ರೋಶ ಹೊರಹಾಕಿದ್ದಾರೆ. ವಿದ್ಯಾರ್ಥಿಗಳ ಕೊಠಡಿಯಿಂದ ವಶಪಡಿಸಿಕೊಂಡಿರುವ ಆತ್ಮಹತ್ಯೆ ಪತ್ರಗಳನ್ನು ಪೊಲೀಸರು ಬಚ್ಚಿಡುತ್ತಿದ್ದಾರೆ ಎಂದು ಆರೋಪಿಸಿದರು.

ಇತ್ತೀಚಿನ ಆತ್ಮಹತ್ಯೆ ಪ್ರಕರಣದಲ್ಲಿ ರಾಜಸ್ಥಾನದ ವಿದ್ಯಾರ್ಥಿನಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಎರಡು ದಿನಗಳ ಹಿಂದೆ ಬಿಹಾರದ ವಿದ್ಯಾರ್ಥಿ ಕೂಡ ತನ್ನ ಹಾಸ್ಟೆಲ್ ಕೋಣೆಯಲ್ಲಿ ಸೀಲಿಂಗ್ ಫ್ಯಾನ್‌ಗೆ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

- Advertisement -

Related news

error: Content is protected !!