Saturday, June 20, 2026
spot_imgspot_img
spot_imgspot_img

500 ರೂಪಾಯಿ ಪ್ಯಾಡ್ ಫೋನ್’​ಗಾಗಿ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ

- Advertisement -
- Advertisement -

ಬೆಂಗಳೂರು: 500 ರೂಪಾಯಿಯ ಕೀ ಪ್ಯಾಡ್ ಫೋನ್ ​ಗಾಗಿ ವ್ಯಕ್ತಿಯ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿರುವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿ ಕುಡಿದ ನಶೆಯಲ್ಲಿ ರಸ್ತೆಬದಿ ಮಲಗಿದ್ದವರ ಜೇಬಿನಿಂದ ಹಣ ಹಾಗೂ ಮೊಬೈಲ್ ಕಳ್ಳತನ ಮಾಡುತ್ತಿದ್ದ. ಅದರಂತೆ ಕಾಮಾಕ್ಷಿಪಾಳ್ಯ ಠಾಣಾ ವ್ಯಾಪ್ತಿಯ ಬಾರ್ ಮುಂದೆ ಕುಡಿದು ಮಲಗಿದ್ದ ಸತೀಶ್​ ಎಂಬಾತನ ಜೇಬಿನಲ್ಲಿದ್ದ ಮೊಬೈಲ್ ಕದಿಯಲು ಯತ್ನಿಸಿದ್ದಾನೆ.

ಕೂಡಲೇ ಎಚ್ಚರಗೊಂಡ ಸತೀಶ್​, ಆತನನ್ನು ತಡೆದಿದ್ದಾನೆ. ಬಳಿಕ ಆರೋಪಿ, ಸತೀಶ್​ ತಲೆ ಮೇಲೆ ಹ್ಯಾಲೋ ಬ್ರಿಕ್ಸ್ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದಾನೆ. ಆರೋಪಿಯನ್ನು ಬಂಧಿಸಿ, ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ.

- Advertisement -

Related news

error: Content is protected !!