Saturday, April 27, 2024
spot_imgspot_img
spot_imgspot_img

ಮನೆಯೊಳಗಿತ್ತು 500 ವರ್ಷಗಳ ಹಿಂದಿನ ಬಾವಿ..! ಯಾವೆಲ್ಲಾ ವಸ್ತುಗಳು ಯಜಮಾನನ ಕೈ ಸೇರಿವೆ ಗೊತ್ತಾ?

- Advertisement -G L Acharya panikkar
- Advertisement -

ಹಳೆ ಕಾಲದ ಮನೆಗಳೊಳಗೆ ವಿಚಿತ್ರ ಎನಿಸುವ ವಸ್ತುಗಳು ಇರುವುದು ಸಾಮಾನ್ಯ. ಆದ್ರೆ ಇಲ್ಲೊಂದು ಕಡೆ ಒಂದು ಬಾವಿ ಪತ್ತೆಯಾಗಿದೆ. ಅದರಲ್ಲಿ ಏನೆಲ್ಲಾ ವಸ್ತು ಪತ್ತೆಯಾಗಿದೆ ಗೊತ್ತಾ..? ಮುಂದೆ ಓದಿ…

ಇಂಗ್ಲೆಂಡ್‌ನ ಒಂದು ಮನೆಯೊಳಗೆ ವಿಶೇಷವೆನಿಸುವ ಬಾವಿಯೇ ಪತ್ತೆಯಾಗಿದೆ. ಆ ಬಾವಿಯನ್ನು ಸರಿಯಾಗಿ ಪರಿಶೀಲಿಸಿದಾಗ ಹಲವು ವಿಶೇಷ ವಸ್ತುಗಳು ಯಜಮಾನನ ಕೈ ಸೇರಿದೆ. ಇಂಗ್ಲೆಂಡ್‌ನ ಪ್ಲೈಮೌತ್‌ನಲ್ಲಿ ವಾಸಿಸುವ 70 ವರ್ಷದ ಕಾಲಿನ್ ಸ್ಟಿಯರ್ ಎನ್ನುವವರ ಮನೆಯಲ್ಲಿ ಬಾವಿ ಪತ್ತೆಯಾಗಿದೆ. ಆ ಮನೆಯನ್ನು 1895ರಲ್ಲಿ ನಿರ್ಮಿಸಲಾಗಿದ್ದು, 1988ರಿಂದ ಆತ ಅಲ್ಲಿ ವಾಸವಿದ್ದಾನಂತೆ.

ಒಮ್ಮೆ ಮನೆಯ ಒಳಾಂಗಣವನ್ನು ಬದಲಾಯಿಸುವ ನಿಟ್ಟಿನಲ್ಲಿ ಆತ ಬದಲಾವಣೆ ಮಾಡುತ್ತಿದ್ದಾಗ ಒಂದು ಕಿಟಿಕಿಯ ಬಳಿ ನೆಲ ಟೊಳ್ಳಾಗಿರುವಂತೆ ಸದ್ದು ಬಂದಿದೆ. ಅದಾದ ಮೇಲೆ ಅಲ್ಲಿ ಸರಿಯಾಗಿ ಪರಿಶೀಲಿಸಿದಾಗ ಅಲ್ಲೊಂದು ಬಾವಿ ಇರುವುದು ಪತ್ತೆಯಾಗಿದೆ. ಬಾವಿಯ ಮೊದಲು ಐದು ಅಡಿ ಕೆಳಗೆ ಪರಿಶೀಲಿಸಿದಾಗ ಅಲ್ಲೊಂದು ಹಳೆಯ ಖಡ್ಗ ಪತ್ತೆಯಾಗಿದೆ.

ಇನ್ನೂ ಸ್ವಲ್ಪ ಕೆಳಗಿಳಿದಾಗ 1725ರ ನಾಣ್ಯವೊಂದು ಹಾಗೂ ಇನ್ನೂ ಕೆಳಗಿಳಿದಾಗ ಉಂಗುರವೊಂದು ಸಿಕ್ಕಿದೆ. 17 ಅಡಿಗಳ ಕೆಳಗೆ ನೀರು ಪತ್ತೆಯಾಗಿದೆ. ನೀರನ್ನು ವೈದ್ಯಕೀಯ ಪರೀಕ್ಷೆಗೆ ಕೊಟ್ಟಿದ್ದು, ಒಂದು ವೇಳೆ ನೀರು ಆರೋಗ್ಯಕರವಾಗಿದ್ದರೆ ಅದನ್ನು ಮಾರಾಟ ಮಾಡುವುದಾಗಿ ಕಾಲಿನ್ ಹೇಳಿದ್ದಾನೆ. ಈ ಪ್ರದೇಶದ ಹಳೆಯ ನಕ್ಷೆಗಳನ್ನೂ ಪರಿಶೀಲಿಸಿದ್ದೇವೆ. ಈ ಬಾವಿ ಸುಮಾರು 500 ವರ್ಷ ಹಿಂದಿನದು ಎನ್ನಲಾಗಿದೆ. ಇದನ್ನು ಪ್ರಾಣಿಗಳಿಗೆ ನೀರು ಕುಡಿಯುವುದಕ್ಕೆ ಅಥವಾ ಮೂರ್ನಾಲ್ಕು ಕುಟುಂಬಗಳಿಗೆ ನೀರು ಪೂರೈಕೆಗೆ ಬಳಸಿರಬಹುದು ಎಂದು ಆತ ಹೇಳಿದ್ದಾನೆ.

- Advertisement -

Related news

error: Content is protected !!