Thursday, May 2, 2024
spot_imgspot_img
spot_imgspot_img

IPL ಪಂದ್ಯಾಟ: ರಾಯಲ್ ಚಾಲೆಂಜರ್ಸ್ ಬೆಂಗಳೂರು Vs ರಾಜಸ್ಥಾನ್ ರಾಯಲ್ಸ್!

- Advertisement -G L Acharya panikkar
- Advertisement -

ಮುಂಬೈ: ಆರ್‌ಸಿಬಿ ಮತ್ತು ಆರ್‌ಆರ್ ನಡುವಿನ ಐಪಿಎಲ್‌ನ 16 ನೇ ಪಂದ್ಯವು ಏಪ್ರಿಲ್ 22ರಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿದೆ.ಈ ಪಂದ್ಯ ಸಂಜೆ 7.30 ಕ್ಕೆ ಪಂದ್ಯ ಆರಂಭವಾಗಲಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಐಪಿಎಲ್ 2021ರಲ್ಲಿ ಈವರೆಗೆ ಆಡಿದ ಎಲ್ಲಾ ಮೂರು ಪಂದ್ಯಗಳನ್ನು ಗೆದ್ದಿದೆ. ಪಂದ್ಯಾವಳಿಯಲ್ಲಿ ಇದು ಅವರ ಅತ್ಯುತ್ತಮ ಆರಂಭವಾಗಿದೆ ಮತ್ತು ನಾಯಕ ವಿರಾಟ್ ಕೊಹ್ಲಿ ಇಂದು ರಾಜಸ್ಥಾನ್ ರಾಯಲ್ಸ್ (ಆರ್​ಆರ್​) ತಂಡವನ್ನು ಸೋಲಿಸಿ ಗೆಲುವಿನ ಲಯವನ್ನು ಮುಂದುವರೆಸಿಕೊಂಡು ಹೋಗಲು ತವಕಿಸುತ್ತಿದ್ದಾರೆ. ಅಲ್ಲದೆ ಆರ್​ಸಿಬಿಯ ಎಲ್ಲಾ ವಿಭಾಗವು ಬಲಿಷ್ಠವಾಗಿ ಕಾಣುತ್ತಿದ್ದು ನಾಯಕ ಕೊಹ್ಲಿಗೆ ಯಾವುದೇ ಚಿಂತೆ ಇಲ್ಲದೆ ಬ್ಯಾಟಿಂಗ್ ಮಾಡಲು ಅನುವು ಮಾಡಿಕೊಟ್ಟಂತಾಗಿದೆ.

ಆದರೆ ಆರ್‌ಆರ್‌ ತಂಡದಲ್ಲಿ ಹಲವು ಸಮಸ್ಯೆಗಳಿವೆ, ಆರಂಭಿಕರಾದ ಜೋಸ್ ಬಟ್ಲರ್ ಮತ್ತು ಮನನ್ ವೊಹ್ರಾ ಬ್ಯಾಟ್‌ನೊಂದಿಗೆ ಫಾರ್ಮ್​ ಕಾಪಾಡಿಕೊಂಡಿದ್ದಾರೆ. ಆದರೆ ಎಲ್ಲರಿಗಿಂತ ಮುಂಚೂಣಿಯಲ್ಲಿರುವ ಆರ್​ಸಿಬಿ ವಿರುದ್ಧದ ಕಠಿಣ ಪಂದ್ಯಕ್ಕಿಂತ ಮುಂಚಿತವಾಗಿ ಅವರು ತಮ್ಮ ಆಟವನ್ನು ವೃದ್ಧಿಸಿಕೊಳ್ಳಬೇಕಾಗಿದೆ. ಇತ್ತ ಆರ್​ಆರ್​ ತಂಡದ ಕ್ಯಾಪ್ಟನ್ ಸಂಜು ಸ್ಯಾಮ್ಸನ್ ಮೊದಲ ಪಂದ್ಯವೊಂದನ್ನು ಬಿಟ್ಟರೆ ನಂತರ ಅತ್ಯುತ್ತಮ ಆಟವನ್ನೇನೂ ತೋರಿಸಿಲ್ಲ. ಮೊದಲ ಪಂದ್ಯದಲ್ಲಿ ಶತಕ ಗಳಿಸಿದ ಅವರು ನಂತರ ಎರಡು ತಂಡಗಳಲ್ಲೂ ಕಡಿಮೆ ಸ್ಕೋರ್‌ ದಾಖಲಿಸಿದ್ದಾರೆ. ಡೇವಿಡ್ ಮಿಲ್ಲರ್ ಮತ್ತು ಕ್ರಿಸ್ ಮೋರಿಸ್ ದೆಹಲಿ ಕ್ಯಾಪಿಟಲ್ಸ್ (ಡಿಸಿ) ವಿರುದ್ಧ ಉತ್ತಮ ಪ್ರದರ್ಶನ ನೀಡಿದ್ದಾರೆ. ಆದರೆ ಇಂದಿನ ಪಂದ್ಯದಲ್ಲಿ ಉಳಿದ ಭಾರತದ ಬ್ಯಾಟ್ಸ್‌ಮನ್‌ಗಳಾದ ಶಿವಮ್ ದುಬೆ, ರಿಯಾನ್ ಪರಾಗ್ ಮತ್ತು ರಾಹುಲ್ ತಿವಾಟಿಯಾ ಅವರಿಂದಲೂ ಉತ್ತಮ ಆಟವನ್ನು ನಿರೀಕ್ಷಿಸಲಾಗಿದೆ.

ಇದಕ್ಕೆ ತದ್ವಿರುದ್ಧವಾಗಿ, ಆರ್‌ಸಿಬಿಯ ದೇಶೀಯ ಮತ್ತು ಅಂತಾರಾಷ್ಟ್ರೀಯ ಆಟಗಾರರೆಲ್ಲರೂ ಫಾರ್ಮ್​ನಲ್ಲಿದ್ದಾರೆ. ಇದು ಅವರು ಪ್ರಸ್ತುತ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರಲು ದೊಡ್ಡ ಕಾರಣವಾಗಿದೆ. ಗ್ಲೆನ್ ಮ್ಯಾಕ್ಸ್ ವೆಲ್ ಮತ್ತು ಡಿವಿಲಿಯರ್ಸ್ ಇಲ್ಲಿಯವರೆಗೆ ಉತ್ತಮ ಪ್ರದರ್ಶನ ನೀಡಿದ್ದಾರೆ ಮತ್ತು ಭಾರತದ ಸ್ಥಳೀಯ ಪ್ರತಿಭೆಗಳು ಸಹ ಈ ಋತುವಿನಲ್ಲಿ ತಂಡಕ್ಕೆ ಉತ್ತಮವಾಗಿ ನೆರವಾಗಿದ್ದಾರೆ.

ಪಂದ್ಯವು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಪ್ರಸಾರವಾಗಲಿದೆ. ಪಂದ್ಯದ ಲೈವ್ ಸ್ಟ್ರೀಮಿಂಗ್ ಡಿಸ್ನಿ + ಹಾಟ್‌ಸ್ಟಾರ್‌ನಲ್ಲಿಯೂ ಲಭ್ಯವಿರುತ್ತದೆ.

- Advertisement -

Related news

error: Content is protected !!