Thursday, August 6, 2026
spot_imgspot_img
spot_imgspot_img

52 ವರ್ಷದ ಶಿಕ್ಷಕನನ್ನು ಪ್ರೀತಿಸಿ ವಿವಾಹವಾದ 20 ವರ್ಷದ ವಿದ್ಯಾರ್ಥಿನಿ

- Advertisement -
- Advertisement -

ಪಾಕಿಸ್ತಾನ: 20 ವರ್ಷದ ವಿದ್ಯಾರ್ಥಿನಿಯೊಬ್ಬಳು 52 ವರ್ಷದ ಶಿಕ್ಷಕನನ್ನು ಪ್ರೀತಿಸಿ ಅವರನ್ನೇ ಮದುವೆಯಾಗಿ ಸುಖ ಸಂಸಾರ ನಡೆಸುತ್ತಿದ್ದಾರೆ.

ಪಾಕಿಸ್ತಾನದಲ್ಲಿ 20 ವರ್ಷದ ಜೋಯಾ ನೂರ್ 52 ವರ್ಷದ ಸಾಜಿದ್ ಅಲಿಯನ್ನು ಪ್ರೀತಿಸುತ್ತಿದ್ದಳು. ಜೋಯಾ ನೂರ್ ಬಿ.ಕಾಂ ಓದುತ್ತಿದ್ದ ಕಾಲೇಜಿನಲ್ಲಿ ಸಾಜಿದ್ ಅಲಿ ಶಿಕ್ಷಕನಾಗಿ ಕಾರ್ಯನಿರ್ವಹಿಸುತ್ತಿದ್ದ. ಸಾಜಿದ್ ಅಲಿಯ ನೋಟ ಹಾಗೂ ವ್ಯಕ್ತಿತ್ವ ಜೋಯಾ ನೋರ್ ಮೇಳೆ ಬಹಳ ಪ್ರಭಾವ ಬೀರಿತ್ತು. ಆಕರ್ಷಣೆಯಿಂದ ಆರಂಭವಾಯಿತಾದರೂ ಕೊನೆಗೆ ಇದು ಪ್ರೀತಿಗೆ ತಿರುಗಿತ್ತು.

32 ವರ್ಷಗಳ ಅಂತರ ನಮ್ಮ ನಡುವೆ ಇದ್ದ ಕಾರಣ, ನಮ್ಮ ಸಂಬಂಧಿಗಳು ಈ ಮದುವೆಗೆ ಒಪ್ಪಿರಲಿಲ್ಲ. ಕೊನೆಗೆ ಅವರೇ ತೀರ್ಮಾನ ಮಾಡಿ ಮದುವೆಯಾಗಲು ತೀರ್ಮಾನಿಸಿದ್ದರು ಎಂದು ಈ ಜೋಡಿ ಸಂದರ್ಶನವೊಂದರಲ್ಲಿ ತನ್ನ ಪ್ರೇಮಕಥೆಯನ್ನು ಹೇಳಿಕೊಂಡಿದೆ.

- Advertisement -

Related news

error: Content is protected !!