Monday, May 6, 2024
spot_imgspot_img
spot_imgspot_img

52ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಧರ್ಮನಗರ -ಕಂಬಳಬೆಟ್ಟು

- Advertisement -G L Acharya panikkar
- Advertisement -

ಧಾರ್ಮಿಕ ಸಭೆಯಲ್ಲಿ ಯುವ ವಾಗ್ಮಿ ಹಾರಿಕಾ ಮಂಜುನಾಥ್ ಭಾಷಣ

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರೇರಣೆಯಿಂದ ಕಳೆದ 51 ವರ್ಷಗಳಿಂದ ವಿಜೃಂಭಣೆಯಿಂದ ಆಚರಿಸಿಕೊಂಡು ಬರಲಾಗುತ್ತಿರುವ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಧರ್ಮನಗರ ಕಂಬಳಬೆಟ್ಟು ಇಲ್ಲಿ ಈ ಬಾರಿ 52 ನೇ ವರ್ಷದ ಶ್ರೀ ಮಹಾಗಣೇಶೋತ್ಸವ ಬಹಳ ಅದ್ದೂರಿಯಾಗಿ ಜರಗುತ್ತಿದೆ.

52ನೇ ವರ್ಷದ ಶ್ರೀ ಮಹಾ ಗಣೇಶೋತ್ಸವದ ಎರಡನೇ ದಿನದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಭಾರತ ಎನ್ನುವ ಕಲ್ಪನೆಯನ್ನು ಕಣ್ಣ ಮುಂದೆ ಇಟ್ಟುಕೊಂಡಿರುವ ಬೆಂಗಳೂರಿನ ಯುವವಾಗ್ಮಿ ಹಾರಿಕಾ ಮಂಜುನಾಥ್ ಭಾಗವಹಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಸನಾತನ ಧರ್ಮದ ಆಚಾರ ವಿಚಾರ ಮೂಲ, ಬಾಲ ಗಂಗಾಧರ ತಿಲಕ್ ಯಾಕಾಗಿ ಗಣೇಶೋತ್ಸವವನ್ನು ಆರಂಭಿಸಿದರು, ಇವೆಲ್ಲದುದರ ಬಗ್ಗೆ ಧಾರ್ಮಿಕ ಪ್ರವಚನ ಗೈದರು.

ವೇದಿಕೆಯಲ್ಲಿ ಸಮಿತಿ ಅಧ್ಯಕ್ಷ ರಾಘವ ಮಂಜಪ್ಪಾಲು ಉಪಸ್ಥಿರಿದ್ದರು. ಕುಮಾರಿ ಧನ್ವಿ ಅಮೃತವಚನ ಮತ್ತು ಚರಣ್ ಅಮೈ ವೈಯಕ್ತಿಕ ಗೀತೆ ಹಾಡಿದರು. ಕಾರ್ತಿಕ್ ಶೆಟ್ಟಿ ಮೂಡೈಮಾರ್ ಸ್ವಾಗತಿಸಿ, ಸುನೀತಾ ಧರ್ಮನಗರ ಧನ್ಯವಾದಗೈದರು. ನವೀನ್ ಮೂಡೈಮಾರ್ ಕಾರ್ಯಕ್ರಮ ನಿರೂಪಿಸಿದರು.

- Advertisement -

Related news

error: Content is protected !!