Friday, July 31, 2026
spot_imgspot_img
spot_imgspot_img

28 ವರ್ಷಗಳ ಆದರ್ಶ ಸೇವೆಗೆ ಗೌರವಯುತ ವಿದಾಯ: ಕೆ.ಎಸ್.ಆರ್.ಟಿ.ಸಿ. ಸಂಚಾರ ನಿಯಂತ್ರಕ ವೀರಪ್ಪನ್ ಪಿ ಸೇವಾ ನಿವೃತ್ತಿ

- Advertisement -
- Advertisement -


ಪುತ್ತೂರು: ಸುಳ್ಯ ತಾಲೂಕಿನ ಐವರ್ನಾಡು ಗ್ರಾಮದ ವೀರಪ್ಪನ್ ಪಿ ಅವರು 28 ವರ್ಷಗಳ ಸುದೀರ್ಘ ಹಾಗೂ ಮಾದರಿಯ ಸೇವೆಯ ಬಳಿಕ ಜುಲೈ 31ರಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆ.ಎಸ್.ಆರ್.ಟಿ.ಸಿ.) ಸೇವೆಯಿಂದ ನಿವೃತ್ತರಾದರು.
1966ರ ಜುಲೈ 23ರಂದು ವೀರಪ್ಪನ್ ಪಿ ಹಾಗೂ ಸೆಲ್ಲಮ್ಮ ವಿ ದಂಪತಿಗಳ ಪುತ್ರನಾಗಿ ಜನಿಸಿದ ಅವರು ಪದವಿ ಶಿಕ್ಷಣ ಪೂರ್ಣಗೊಳಿಸಿ, 1998ರ ಮೇ 20ರಂದು ಕೆ.ಎಸ್.ಆರ್.ಟಿ.ಸಿ. ಮಂಗಳೂರು ವಿಭಾಗದ 2ನೇ ಘಟಕದಲ್ಲಿ ನಿರ್ವಾಹಕರಾಗಿ ಸೇವೆ ಆರಂಭಿಸಿದರು. ಬಳಿಕ ಮುಂಬಡ್ತಿ ಹೊಂದಿ ಪುತ್ತೂರು ವಿಭಾಗದ ಪುತ್ತೂರು ಘಟಕದಲ್ಲಿ ಪುತ್ತೂರು ಹಾಗೂ ಉಪ್ಪಿನಂಗಡಿ ಬಸ್ ನಿಲ್ದಾಣಗಳಲ್ಲಿ ಸಂಚಾರ ನಿಯಂತ್ರಕರಾಗಿ ಕರ್ತವ್ಯ ನಿರ್ವಹಿಸಿದರು.


ತಮ್ಮ 28 ವರ್ಷಗಳ ಸೇವಾವಧಿಯಲ್ಲಿ ಪ್ರಾಮಾಣಿಕತೆ, ಶಿಸ್ತು, ಕರ್ತವ್ಯನಿಷ್ಠೆ ಮತ್ತು ಜವಾಬ್ದಾರಿಯುತ ಕಾರ್ಯವೈಖರಿಯಿಂದ ಅಧಿಕಾರಿಗಳು ಹಾಗೂ ಸಹೋದ್ಯೋಗಿಗಳ ಪ್ರೀತಿ-ವಿಶ್ವಾಸಕ್ಕೆ ಪಾತ್ರರಾಗಿದ್ದರು. ಉತ್ತಮ ಸೇವೆಗಾಗಿ ಹಲವು ಪುರಸ್ಕಾರಗಳು ಹಾಗೂ ಪ್ರಶಂಸನಾ ಪತ್ರಗಳನ್ನು ಪಡೆದು ಮಾದರಿ ನೌಕರರಾಗಿ ಗುರುತಿಸಿಕೊಂಡಿದ್ದಾರೆ.


ನಿವೃತ್ತಿ ಅಂಗವಾಗಿ ಪುತ್ತೂರು ಘಟಕದಲ್ಲಿ ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿ ಘಟಕ ವ್ಯವಸ್ಥಾಪಕರು ಹಾಗೂ ಸಿಬ್ಬಂದಿಗಳು ಅವರನ್ನು ಆತ್ಮೀಯವಾಗಿ ಸನ್ಮಾನಿಸಿ, ಮುಂದಿನ ನಿವೃತ್ತಿ ಜೀವನ ಸುಖ, ಶಾಂತಿ, ಆರೋಗ್ಯ ಮತ್ತು ನೆಮ್ಮದಿಯಿಂದ ಕೂಡಿರಲೆಂದು ಶುಭ ಹಾರೈಸಿದರು. ಶ್ರೀ ಮಹಾಲಿಂಗೇಶ್ವರ ದೇವರು ಅವರಿಗೆ ಆಯುರಾರೋಗ್ಯ, ಭಾಗ್ಯ ಹಾಗೂ ಸೌಭಾಗ್ಯವನ್ನು ಕರುಣಿಸಲಿ ಎಂದು ಪ್ರಾರ್ಥಿಸಲಾಯಿತು.

- Advertisement -

Related news

error: Content is protected !!