Friday, July 24, 2026
spot_imgspot_img
spot_imgspot_img

ವಿಟ್ಲ:ನೀಟ್ ಹೋರಾಟಕ್ಕೆ ಧಾರ್ಮಿಕ ಬಣ್ಣ- ಸ್ಟೇಟಸ್ ಹಾಕಿದ ಯುವಕನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ ಪೊಲೀಸರು-ಕಾನೂನು ಪ್ರಕಾರ ನೋಟಿಸ್ ನೀಡದೆ ಬಂಧನ; ಬಿಡುಗಡೆ ಗೊಳಿಸಿದ ನ್ಯಾಯಾಲಯ…!

- Advertisement -
- Advertisement -

ವಿಟ್ಲ, ಜು. 24: ನೀಟ್ ಹೋರಾಟವನ್ನು ಅವಹೇಳನ ಮಾಡುವ ನೀಟ್ ಹೋರಾಟಕ್ಕೆ ಧಾರ್ಮಿಕ ಬಣ್ಣ ಹಚ್ಚಿದ್ದಾನೆ ಎಂಬ ಆರೋಪಿಸಿಸಾಮಾಜಿಕ ಜಾಲತಾಣದಲ್ಲಿ ಸ್ಟೇಟಸ್ ಹಾಕಿ ಪೋಸ್ಟ್‌ ಪ್ರಸಾರ ಮಾಡಿದ ಆರೋಪದಡಿ ವಿಟ್ಲ ಪೊಲೀಸರು ಕೇಪು ಗ್ರಾಮದ ನಿವಾಸಿ ಭರತ್ (36) ಎಂಬಾತನನ್ನು ನಿನ್ನೆ ಸಂಜೆ ಬಂಧಿಸಿ ಇಂದು ಬಂಟ್ವಾಳದ ಹೆಚ್ಚುವರಿ ದರ್ಜೆ ಕ್ರಿಮಿನಲ್ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು.

ಗುರುವಾರ ಸಂಜೆ ಭರತ್ ಅವರನ್ನು ವಿಟ್ಲ ಪೊಲೀಸರು ಬಂಧಿಸಿ ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರು, ಇಂತಹ ಪ್ರಕರಣಗಳಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) ಹಾಗೂ ಅನ್ವಯವಾಗುವ ಕಾನೂನು ಪ್ರಕ್ರಿಯೆಯ ಪ್ರಕಾರ ತನಿಖೆಗೆ ಹಾಜರಾಗುವಂತೆ ನೋಟಿಸ್ ನೀಡುವುದು ಮೊದಲ ಕ್ರಮವಾಗಿರಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಬಂಧಿತ ಭರತ್ ಎಂಬಾತನನ್ನು ನ್ಯಾಯಾಲಯ ಬಿಡುಗಡೆ ಮಾಡಿದೆ..ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ ನೋಟಿಸ್ ನೀಡಿ ತನಿಖೆ ನಡೆಸುವಂತೆ ಸೂಚಿಸಿದ್ದಾರೆ.

- Advertisement -

Related news

error: Content is protected !!