


ಮಂಗಳೂರು, ಸೆ.29: ನಗರದ ಕೋರ್ಟ್ ಕ್ರಾಸ್ ರಸ್ತೆ, ರಾಧಾ ಮೆಡಿಕಲ್ ಬಳಿ ಸೋಮವಾರ ಬೆಳಗ್ಗೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಮೂವರು ಗಾಯಗೊಂಡಿದ್ದಾರೆ.
ದೂರುದಾರರಾದ ವಿನಯ್ ಡಿ (47), ಹತ್ತಿಲ್ ನಿವಾಸಿ, ತಮ್ಮ KA-05-NK-2504 ನಂ. ಕಾರಿನಲ್ಲಿ ಕರ್ತವ್ಯ ನಿಮಿತ್ತ ಮನೆಯಿಂದ ಜಿಲ್ಲಾ ನ್ಯಾಯಾಲಯಕ್ಕೆ ತೆರಳುತ್ತಿದ್ದರು. ಬಾವುಟಗುಡ್ಡದ ಬಳಿ ರಾಧಾ ಮೆಡಿಕಲ್ ಎದುರಿನ ತಿರುವಿನಲ್ಲಿ ಬರುತ್ತಿದ್ದಾಗ, ನ್ಯಾಯಾಲಯದ ಕಡೆಯಿಂದ ಅತೀ ವೇಗವಾಗಿ ಬಂದ KA-19-AD-4395 ನಂ. ಗೂಡ್ಸ್ ಆಟೋರಿಕ್ಷಾ ಚಾಲಕ ನಿಯಂತ್ರಣ ತಪ್ಪಿ, ಇಳಿಜಾರು ರಸ್ತೆಯಲ್ಲಿ ಕಾರಿನ ಮುಂಭಾಗಕ್ಕೆ ಡಿಕ್ಕಿ ಹೊಡೆದಿದ್ದಾನೆ.ಡಿಕ್ಕಿಯ ರಭಸಕ್ಕೆ ಆಟೋ ಪಲ್ಟಿಯಾಗಿ, ಅಲ್ಲೇ ಹೋಗುತ್ತಿದ್ದ KA-19-HY-1664 ನಂ. ಸ್ಕೂಟರ್ಗೂ ಗುದ್ದಿದೆ. ಪರಿಣಾಮ ಸ್ಕೂಟರ್ ಸವಾರ ರಸ್ತೆಗೆ ಬಿದ್ದು ಗಂಭೀರ ಗಾಯಗೊಂಡಿದ್ದಾನೆ. ಆಟೋ ಚಾಲಕನಿಗೂ ಗಂಭೀರ ಗಾಯವಾಗಿದ್ದು, ಕಾರು ಚಾಲಕ ವಿನಯ್ ಅವರಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಮೂರೂ ವಾಹನಗಳು ಜಖಂಗೊಂಡಿವೆ
ಈ ಕುರಿತು ಸಂಚಾರ ಪೂರ್ವ ಪೊಲೀಸ್ ಠಾಣೆ, ಕದ್ರಿಯಲ್ಲಿ ಅ.ಕ್ರ.ಸಂ. 130/2026 ಕಲಂ 281, 125(a), 125(b) BNS ಮತ್ತು 184 IMV ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆ ಮುಂದುವರಿದಿದೆ.








