- Advertisement -
- Advertisement -



ಬೆಂಗಳೂರು: ಉಪ್ಪು ಬಳಕೆ ಮತ್ತು ಸೇವನೆ ಬಗ್ಗೆ ಎಚ್ಚರಿಕೆ ನೀಡಿರುವ ಆರೋಗ್ಯ ಇಲಾಖೆ ಮಾರ್ಗಸೂಚಿ ಪ್ರಕಟಿಸಿ, ಸಾರ್ವಜನಿಕರು, ಶಾಲೆಗಳು, ಹೋಟೆಲ್-ರೆಸ್ಟೋರೆಂಟ್, ಆಹಾರ ಪ್ಯಾಕೇಜ್ಡ್ ತಯಾರಕರಿಗೆ ಗೈಡ್ಲೈನ್ಸ್ ಬಿಡುಗಡೆ ಮಾಡಿದೆ.
ಅತಿಯಾದ ಉಪ್ಪು ಸೇವನೆಯಿಂದ ರಕ್ತದೊತ್ತಡ, ಹೃದಯಾಘಾತ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಹಿನ್ನೆಲೆ ಇಲಾಖೆ ಮಾರ್ಗಸೂಚಿ ಹೊರಡಿಸಿದ್ದು, ಒಬ್ಬ ವ್ಯಕ್ತಿ 5 ಗ್ರಾಂಗಿಂತ ಕಡಿಮೆ ಉಪ್ಪು ಸೇವನೆ ಮಾಡಬೇಕು. ಆದರೆ, ಅತಿಯಾದ ಸೇವನೆ ಮಾಡಲಾಗುತ್ತಿರುವುದಾಗಿ ಎಚ್ಚರಿಸಿದೆ ಎಂದು ತಿಳಿದುಬಂದಿದೆ.
ಉಪ್ಪು ಸೇವನೆ; ಸಾಮಾನ್ಯ ಜನರಿಗೆ ಮಾರ್ಗಸೂಚಿ:
- ದಿನಕ್ಕೆ 5 ಗ್ರಾಂ ಗಿಂತ ಕಡಿಮೆ ಉಪ್ಪು ಸೇವಿಸಿ.
- ಅಡುಗೆ ಮಾಡುವಾಗ ಉಪ್ಪನ್ನು ಕಡಿಮೆ ಹಾಕಿ. ಉಪ್ಪಿನಕಾಯಿ, ಚಟ್ನಿ, ಸ್ನ್ಯಾಕ್ಸ್ ಮಾಡುವಾಗ ಉಪ್ಪು ಕಡಿಮೆ ಬಳಸಿ.
- ಊಟ ಮಾಡುವ ಮೊದಲು ರುಚಿ ನೋಡದೆ ಸುಮ್ಮನೆ ಉಪ್ಪು ಹಾಕಬೇಡಿ.
- ಸಂಸ್ಕರಿಸಿದ, ಪ್ಯಾಕ್ ಮಾಡಿದ, ಇನ್ ಸ್ಟಂಟ್ ಮತ್ತು ರೆಡಿ-ಟು-ಈಟ್ ಆಹಾರಗಳನ್ನು ಕಡಿಮೆ ತಿನ್ನಿ.
- ಪ್ಯಾಕ್ ಮಾಡಿದ ಆಹಾರ ಕೊಳ್ಳುವಾಗ ಅದರ ಲೇಬಲ್ನಲ್ಲಿ ಉಪ್ಪು/ಸೋಡಿಯಂ ಅಂಶ ನೋಡಿ ಹೋಲಿಕೆ ಮಾಡಿಕೊಳ್ಳಿ.
- ತಾಜಾ ಮತ್ತು ಕಡಿಮೆ ಸಂಸ್ಕರಿಸಿದ ಆಹಾರ, ಹಣ್ಣು-ತರಕಾರಿ ಹೆಚ್ಚು ಸೇವಿಸಿ.
- ಪೋಷಕರು ಚಿಕ್ಕ ವಯಸ್ಸಿನಿಂದಲೇ ಮಕ್ಕಳಿಗೆ ಕಡಿಮೆ ಉಪ್ಪಿನ ಅಭ್ಯಾಸ ಬೆಳೆಸಿ.
- BP ಅಥವಾ ಇತರ ಕಾಯಿಲೆ ಇರುವವರು ಉಪ್ಪು ಕಡಿಮೆ ಮಾಡುವ ಬಗ್ಗೆ ವೈದ್ಯರ ಸಲಹೆ ಪಡೆಯಿರಿ.
- Low-sodium ಉಪ್ಪಿನ ಬದಲಿ ಬಳಸುವಾಗ ಆಹಾರ ಸುರಕ್ಷತೆ ಮತ್ತು ವೈದ್ಯಕೀಯ ಸಲಹೆ ಪಾಲಿಸಿ, ವಿಶೇಷವಾಗಿ ಕಿಡ್ನಿ ಕಾಯಿಲೆ ಇರುವವರು.
ಉಪ್ಪು ತಯಾರಿಕಾ ಘಟಕಗಳಿಗೆ ಸೂಚನೆ:
- ಸರ್ಕಾರದ ಉಪ್ಪು ಕಡಿತ ಪ್ರಯತ್ನಕ್ಕೆ ಬೆಂಬಲ ನೀಡಿ.
- Low-sodium ಅಥವಾ iodised low-sodium ಉಪ್ಪಿನ ಬದಲಿ ತಯಾರಿಸಲು ಪ್ರಯತ್ನಿಸಿ.
- Low-sodium ಉಪ್ಪು ಎಲ್ಲಾ ಆಹಾರ ಸುರಕ್ಷತಾ ಮಾನದಂಡಗಳನ್ನು ಪಾಲಿಸಬೇಕು.
- ಉತ್ಪನ್ನದ ಸಂಯೋಜನೆ, ಬಳಕೆ ಮತ್ತು ಮುನ್ನೆಚ್ಚರಿಕೆಗಳನ್ನು ಲೇಬಲ್ನಲ್ಲಿ ಸ್ಪಷ್ಟವಾಗಿ ನಮೂದಿಸಿ.
- ಗುಣಮಟ್ಟ ನಿಯಂತ್ರಣ ಕ್ರಮ ಕೈಗೊಳ್ಳಿ.
- ಆರೋಗ್ಯ ಇಲಾಖೆ ಮತ್ತು FSSAI ಜೊತೆ ಸಹಕರಿಸಿ.
ಆಹಾರ ಮತ್ತು ಪ್ಯಾಕೇಜ್ಡ್ ಫುಡ್ ತಯಾರಕರಿಗೆ ಸಲಹೆ:
- ತಮ್ಮ ಉತ್ಪನ್ನಗಳಲ್ಲಿ ಉಪ್ಪು/ಸೋಡಿಯಂ ಅಂಶವನ್ನು ಹಂತ ಹಂತವಾಗಿ ಕಡಿಮೆ ಮಾಡಿ.
- ಆಹಾರ ಸುರಕ್ಷತೆ, ಗುಣಮಟ್ಟಕ್ಕೆ ಧಕ್ಕೆ ಬಾರದೆ ಉಪ್ಪು ಕಡಿಮೆ ಮಾಡಬಹುದಾದ ಉತ್ಪನ್ನಗಳನ್ನು ಗುರುತಿಸಿ.
- ಸೋಡಿಯಂ ಬದಲಿಗೆ ತಾಂತ್ರಿಕವಾಗಿ ಸಾಧ್ಯವಿರುವ ಪರ್ಯಾಯಗಳನ್ನು ಬಳಸಿ.
- ಲೇಬಲ್ನಲ್ಲಿ ಪೌಷ್ಟಿಕಾಂಶದ ಮಾಹಿತಿಯನ್ನು ಸ್ಪಷ್ಟವಾಗಿ ನೀಡಿ.
- ಈSSಂI ಮಾನದಂಡಗಳನ್ನು ಪಾಲಿಸಿ.
ಹೋಟೆಲ್, ರೆಸ್ಟೋರೆಂಟ್ಗಳಿಗೆ ಸಲಹೆ:
- ಅಡುಗೆಯಲ್ಲಿ ಉಪ್ಪನ್ನು ಹಂತ ಹಂತವಾಗಿ ಕಡಿಮೆ ಮಾಡುವ ಪ್ರಮಾಣಿತ ಪದ್ಧತಿ ಅಳವಡಿಸಿ.
- ಅಡುಗೆಯವರಿಗೆ ಕಡಿಮೆ ಉಪ್ಪಿನ ಅಡುಗೆ ಬಗ್ಗೆ ತರಬೇತಿ ನೀಡಿ.
- ಅನಗತ್ಯವಾಗಿ ಉಪ್ಪು ಹಾಕುವುದನ್ನು ತಪ್ಪಿಸಿ.
- ಊಟದ ಮೇಜಿನ ಮೇಲೆ ಉಪ್ಪಿನ ಡಬ್ಬಿ ಇಡುವುದನ್ನು ನಿರುತ್ಸಾಹಗೊಳಿಸಿ.
- ಆರೋಗ್ಯಕರ ಮತ್ತು ಕಡಿಮೆ ಉಪ್ಪಿನ ಆಯ್ಕೆಗಳನ್ನು ನೀಡಿ.
- ‘ಉಪ್ಪು ಕಡಿಮೆ ಮಾಡಿ’ ಎಂಬ ಸಂದೇಶಗಳನ್ನು ಪ್ರದರ್ಶಿಸಿ.
ಸ್ಟ್ರೀಟ್ ಫುಡ್ ಮಾರಾಟಗಾರರಿಗೆ ಸಲಹೆ:
- ಉಪ್ಪು ಕಡಿತದ ಬಗ್ಗೆ ತರಬೇತಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿ.
- ತಯಾರಿಕೆ ಮತ್ತು ಬಡಿಸುವಾಗ ಅನಗತ್ಯ ಉಪ್ಪು ಹಾಕಬೇಡಿ.
- ಸಾಧ್ಯವಾದಷ್ಟು ಕಡಿಮೆ ಉಪ್ಪಿನ ಅಡುಗೆ ಪದ್ಧತಿ ಅಳವಡಿಸಿ.
ಶಾಲಾ-ಕಾಲೇಜುಗಳಿಗೆ ಸೂಚನೆ:
- ಮಕ್ಕಳು ಮತ್ತು ಹದಿಹರೆಯದವರಲ್ಲಿ ಆರೋಗ್ಯಕರ ಆಹಾರ ಮತ್ತು ಉಪ್ಪು ಕಡಿತದ ಬಗ್ಗೆ ಶಿಕ್ಷಣ ನೀಡಿ.
- ಶಾಲೆಯಲ್ಲಿ ನೀಡುವ ಊಟ ಮತ್ತು ಸ್ನ್ಯಾಕ್ಸ್ನಲ್ಲಿ ಉಪ್ಪು ಕಡಿಮೆ ಮಾಡಿ.
- ಶಾಲಾ ಆರೋಗ್ಯ ಕಾರ್ಯಕ್ರಮಗಳಲ್ಲಿ ಉಪ್ಪು ಕಡಿತ ಸಂದೇಶ ಸೇರಿಸಿ.
- ಪೋಷಕರಿಗೆ ಮನೆಯಲ್ಲಿ ಆರೋಗ್ಯಕರ ಅಭ್ಯಾಸ ಬೆಳೆಸಲು ಪ್ರೇರೇಪಿಸಿ.
- ಅಡುಗೆಯವರು ಮತ್ತು ಆಹಾರ ಸಿಬ್ಬಂದಿಗೆ ಉಪ್ಪಿನ ಸರಿಯಾದ ಬಳಕೆ ಬಗ್ಗೆ ತರಬೇತಿ ನೀಡಿ.
- Advertisement -








