Sunday, August 30, 2026
spot_imgspot_img
spot_imgspot_img

ಮೆಸ್ಕಾಂನಲ್ಲಿ 390 ಪವರ್‌ಮೇನ್ ಗಳ ನೇಮಕ: ಹರೀಶ್ ಕುಮಾರ್

- Advertisement -
- Advertisement -

ಮಂಗಳೂರು: ಮೆಸ್ಕಾಂನಲ್ಲಿ ಖಾಲಿ ಇರುವ ಪವರ್‌ಮೇನ್ ಹುದ್ದೆಗಳ ಭರ್ತಿ ಮಾಡಲು 430 ಹುದ್ದೆಗಳಿಗೆ ನೋಟಿಫಿಕೇಶನ್ ಆಗಿತ್ತು. ಈ ಪೈಕಿ 395 ಮಂದಿಯ ನೇಮಕವಾಗಿದ್ದು, ಅವರಿಗೆ ಈಗಾಗಲೇ ನೇಮಕಾತಿ ಪತ್ರ ನೀಡಲಾಗಿದೆ ಎಂದು ಮೆಸ್ಕಾಂ ಅಧ್ಯಕ್ಷ ಹರೀಶ್ ಕುಮಾ‌ರ್ ಹೇಳಿದ್ದಾರೆ.ನಗರದ ಖಾಸಗಿ ಹೋಟೆಲ್‌ನಲ್ಲಿ ಶನಿವಾರ ರಾತ್ರಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.ಇನ್ನೂ ಕೂಡಾ ಪವರ್‌ಮೇನ್‌ ಹುದ್ದೆಗಳ ಖಾಲಿ ಇದೆ. 165 ಮಂದಿಯನ್ನು ನೇಮಕ ಮಾಡಲಾಗುವುದು ಎಂದರು.ಹೊಸ ಪವರ್‌ಮೇನ್‌ಗಳ ಪೈಕಿ ಕೇವಲ 5 ಮಂದಿ ಉಡುಪಿ ಮತ್ತು ದ.ಕ. ಜಿಲ್ಲೆಯವರು ಇದ್ದಾರೆ. ಮೆಸ್ಕಾಂ ವ್ಯಾಪ್ತಿಗೊಳಪಟ್ಟ ಜಿಲ್ಲೆಯವರು ಸುಮಾರು 50 ಮಂದಿ ಎಂದು ಸ್ಪಷ್ಟಪಡಿಸಿದರು.ನಾಲ್ಕು ಜಿಲ್ಲೆಗಳ ವ್ಯಾಪ್ತಿಗೊಳಪಟ್ಟ ಮೆಸ್ಕಾಂನಲ್ಲಿ ಪವರ್‌ಮೆನ್‌ಗಳಳಿಗೆ ಸುರಕ್ಷತೆಯ ದೃಷ್ಟಿಯಿಮದ ಕೆಲಸ ನಿರ್ವಹಿಸಲು 705 ಸಂಖ್ಯೆಯ ನಾನ್ ಕಾನ್‌ಟ್ಯಾಕ್ಟ್ ವೋಲ್ವೇಜ್ ಡಿಟೆಕ್ಟರ್ಸ್‌(ಎನ್‌ಸಿವಿಡಿ)ಅನ್ನು ನೀಡಲಾಗಿದೆ ಎಂದು ಹೇಳಿದರು.

ಮೆಸ್ಕಾಂ ಲಾಭ ಗಳಿಕೆಯತ್ತ ಸಾಗಿದ್ದು, ಮೆಸ್ಕಾಂನ ವ್ಯಾಪ್ತಿಯಲ್ಲಿ ವಿದ್ಯುತ್‌ನ ಸೋರಿಕೆ ಶೇ 12ರಿಂದ ಶೇ 8ಕ್ಕೆ ಇಳಿಕೆಯಾಗಿದೆ. ಗ್ರಾಮ ಪಂಚಾಯತ್‌ಗಳು, ಪುರಸಭೆ, ಪಟ್ಟಣ ಪಂಚಾಯತ್‌ ಸೇರಿದಂತೆ ಸ್ಥಳಿಯಾಡಳಿತ ಸಂಸ್ಥೆಗಳಿಂದ ನೀರು ಪೂರೈಕೆ, ಸ್ಟ್ರೀಟ್ ಲೈಟ್‌ಗೆ ಸಂಬಂಧಿಸಿ 305 ಕೋಟಿ ರೂಪಾಯಿ ಮೆಸ್ಕಾಂಗೆ ಬರಲು ಬಾಕಿ ಇದೆ ಎಂದು ಮಾಹಿತಿ ನೀಡಿದರು.

- Advertisement -

Related news

error: Content is protected !!