- Advertisement -
- Advertisement -





ಹೈದರಾಬಾದ್: ಗಣೇಶ ಮೂರ್ತಿ ವಿಸರ್ಜನೆ ವೇಳೆ ಕೆರೆಯಲ್ಲಿ ಮುಳುಗಿ ಆರು ಬಾಲಕರು ಸಾವನ್ನಪ್ಪಿದ ಘಟನೆ ಹೈದರಾಬಾದ್ ಸಮೀಪದ ಪೆದ್ದ ಕಂಜರ್ಲ ಗ್ರಾಮದಲ್ಲಿ ನಡೆದಿದೆ.
ದತ್ತಿ ಸಂಸ್ಥೆಯೊಂದು ನಡೆಸುತ್ತಿರುವ ಹಾಸ್ಟೆಲ್ನಲ್ಲಿ ಈ ಬಾಲಕರು ವಾಸವಾಗಿದ್ದರು. ಗಣೇಶ ವಿಸರ್ಜನೆ ವೇಳೆ 8 ಬಾಲಕರು ಕೆರೆಗೆ ಬಿದ್ದಿದ್ದು, ಅದರಲ್ಲಿ ಇಬ್ಬರು ಕೆರೆಯಿಂದ ಮೇಲೆ ಎದ್ದು ಬಂದಿದ್ದಾರೆ. ಇನ್ನುಳಿದ 6 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಈ ವೇಳೆ ಪೊಲೀಸ್ ಕಾನ್ಸ್ಟೇಬಲ್ ಒಬ್ಬರು ಬಾಲಕನಿಗೆ ಸಿಪಿಆರ್ ನೀಡಲು ಪ್ರಯತ್ನಿಸಿದರು. ಆದರೆ ಆತನನ್ನು ಬದುಕಿಸಲು ಸಾಧ್ಯವಾಗಲಿಲ್ಲ. ಆ ಕೆರೆಯು ಜನಸಂಚಾರವಿಲ್ಲದ ಏಕಾಂತ ಪ್ರದೇಶದಲ್ಲಿತ್ತು. ಬಾಲಕರನ್ನು ರಕ್ಷಿಸಲು ಪ್ರಯತ್ನಿಸಬಹುದಾದ ಯಾವುದೇ ವಯಸ್ಕರು ಅಲ್ಲಿ ಇರಲಿಲ್ಲ ಎಂದು ಅಧಿಕಾರಿಗಳು ತಿಳಿಸಿರುವುದಾಗಿ ಮೂಲಗಳಿಂದ ತಿಳಿದುಬಂದಿದೆ.
- Advertisement -







