




ಪಾಟ್ನಾ: ಖಾನ್ ಸರ್ ಕೋಚಿಂಗ್ ಸೆಂಟರ್ ಅನ್ನು ಧ್ವಂಸಗೈದ ಆರೋಪ ಎದುರಿಸುತ್ತಿದ್ದ ರೌಶನ್ ಆನಂದ್ ಸಹೋದರ ಪ್ರಿನ್ಸ್ ನೇಪಾಳದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ ಎಂದು ವರದಿಯಾಗಿದೆ.
ಖಾನ್ ಸರ್ ಕೋಚಿಂಗ್ ಸೆಂಟರ್ ಅನ್ನು ಧ್ವಂಸಗೈದ ಆರೋಪದಲ್ಲಿ ರೌಶನ್ ಸರ್ ಎಂದೇ ಜನಪ್ರಿಯರಾಗಿರುವ ಆನಂದ್ ಜೈಲಿನಲ್ಲಿರುವಾಗಲೇ ಈ ಘಟನೆ ನಡೆದಿದೆ. ರೌಶನ್ ಸರ್ ಹಾಗೂ ಖಾನ್ ಸರ್ ಎಂದೇ ಜನಪ್ರಿಯರಾಗಿರುವ ಫೈಸಲ್ ಖಾನ್ ಪಾಟ್ನಾದಲ್ಲಿ ಎರಡು ಪ್ರಮುಖ ಕೋಚಿಂಗ್ ಸೆಂಟರ್ ಗಳನ್ನು ನಡೆಸುತ್ತಿದ್ದು, ರೌಶನ್ ಸರ್ ಗ್ಯಾನ್ ಬಿಂದು ಜಿಎಸ್ ಅಕಾಡೆಮಿ ಮಾಲಕನಾಗಿದ್ದರೆ, ಖಾನ್ ಸರ್ ಖಾನ್ ಗ್ಲೋಬಲ್ ಸ್ಟಡೀಸ್ ನ ಮಾಲಕರಾಗಿದ್ದಾರೆ. ಇವರಿಬ್ಬರ ನಡುವಿನ ಪ್ರತಿಸ್ಪರ್ಧೆ ತೀವ್ರಗೊಂಡ ಪರಿಣಾಮ, ಈ ತಿಂಗಳ ಆರಂಭದಲ್ಲಿ ಖಾನ್ ಸರ್ ಅಕಾಡೆಮಿಯನ್ನು ಧ್ವಂಸಗೈಯ್ಯಲಾಗಿತ್ತು. ಇದರ ಬೆನ್ನಿಗೇ, ರೌಶನ್ ಸರ್ ಅನ್ನು ಬಂಧಿಸಲಾಗಿತ್ತಾದರೆ, ಯಾವುದೇ ಬಲವಂತದ ಕ್ರಮ ಕೈಗೊಳ್ಳುವುದರಿಂದ ಖಾನ್ ಸರ್ ಗೆ ಮಧ್ಯಂತರ ರಕ್ಷಣೆ ದೊರೆತಿತ್ತು.
ಖಾನ್ ಸರ್ ಕೋಚಿಂಗ್ ಸೆಂಟರ್ ಧ್ವಂಸಗೈದ ಪ್ರಕರಣದಲ್ಲಿ ಮತ್ತೊಬ್ಬ ಆರೋಪಿಯಾಗಿದ್ದ ಪ್ರಿನ್ಸ್ ನೇಪಾಳದಲ್ಲಿ ವಾಸಿಸುತ್ತಿದ್ದನೆನ್ನಲಾಗಿದೆ. ಕಳೆದ ರಾತ್ರಿ ಅನುಮಾನಾಸ್ಪದ ಸ್ಥಿತಿಯಲ್ಲಿ ಆತ ಮೃತಪಟ್ಟಿದ್ದು, ಸುದ್ದಿ ತಿಳಿದು ಆತನ ಕುಟುಂಬದ ಸದಸ್ಯರು ನೇಪಾಳಕ್ಕೆ ತೆರಳಿದ್ದಾರೆ ಎಂದು ವರದಿಯಾಗಿದೆ.







