Saturday, May 4, 2024
spot_imgspot_img
spot_imgspot_img

ಭಾರತ ಗಡಿಭಾಗದಲ್ಲಿ 60 ಸಾವಿರ ಸೈನಿಕರನ್ನು ನಿಯೋಜಿಸಿದ ಚೀನಾ; ಹೆಸರು ಬದಲಾವಣೆ, ಗ್ರಾಮ ನಿರ್ಮಾಣ..! ನರಿಬುದ್ಧಿ ಬಿಡದ ಡ್ರ್ಯಾಗನ್ ದೇಶ

- Advertisement -G L Acharya panikkar
- Advertisement -
vtv vitla
vtv vitla
vtv vitla
vtv vitla

ಪದೇ ಪದೇ ಕ್ಯಾತೆ ತೆಗೆಯುತ್ತಿರುವ ಡ್ರ್ಯಾಗನ್ ದೇಶ ಚೀನಾ ಇದೀಗ ಮತ್ತೆ ತನ್ನು ಅಸಲಿ ಮುಖ ತೋರಿಸಿದೆ. ಪೂರ್ವ ಲಡಾಖ್‍ನಲ್ಲಿ ತೀವ್ರವಾದ ಚಳಿಯ ನಡುವೆಯೂ ಚೀನಾವು ತನ್ನ ಕುತಂತ್ರ ಬುದ್ಧಿ ಮಾತ್ರ ಬಿಟ್ಟಿಲ್ಲ. ಸುಮಾರು 60,000 ಸೈನಿಕರನ್ನು ಗಡಿ ನಿಯಂತ್ರಣ ರೇಖೆಯ (ಎಲ್‍ಎಸಿ) ಯ ಉದ್ದಕ್ಕೂ ನಿಯೋಜನೆ ಮಾಡಿದೆ. ಈ ನಡುವೆ ಚೀನಾದ ಭಾರತವೂ ಕೂಡಾ ಲಡಾಖ್‍ನಲ್ಲಿ ತನ್ನ ಸೇನಾ ಬಲವನ್ನು ಹೆಚ್ಚು ಮಾಡಿದೆ.

ಚೀನಾ ಸೇನೆಯು ಲಡಾಖ್‍ನ ವಿರುದ್ಧ ದಿಕ್ಕಿನಲ್ಲಿ ಇರುವ ಪ್ರದೇಶದಿಂದ ಬೇಸಿಗೆ ತರಬೇತಿ ಪಡೆಗಳನ್ನು ಹಿಂದಕ್ಕೆ ಪಡೆದುಕೊಂಡಿದೆ. ಆದರೆ ಇನ್ನೂ ಅಧಿಕ ಅಂದರೆ 60,000 ಸೈನಿಕರನ್ನು ಲಡಾಖ್ ಗಡಿ ಭಾಗದಲ್ಲಿ ನಿಯೋಜನೆ ಮಾಡಿದೆ. ಚೀನಾವು ಯಾವುದೋ ಸಂಚು ಮಾಡಿ ಈ ರೀತಿ ಭಾರೀ ಪ್ರಮಾಣದಲ್ಲಿ ಸೇನೆಯನ್ನು ನಿಯೋಜನೆ ಮಾಡಿದೆ ಎಂದು ಮೂಲಗಳು ತಿಳಿಸಿದೆ.

ಇದನ್ನೂ ಓದಿ: 15 ಸ್ಥಳಗಳ ಹೆಸರು ಬದಲಿಸಿದ ಚೀನಾ..! ಡ್ರ್ಯಾಗನ್ ದೇಶದ ನಿರ್ಧಾರ ತಿರಸ್ಕರಿಸಿದ ಭಾರತ

ಓದಲೇ ಬೇಕು: ಡ್ರ‍್ಯಾಗನ್ ದೇಶದ ಮುಖವಾಡ ಕಳಚಿದ ದೊಡ್ಡಣ್ಣ..! ನಿಯಂತ್ರಣ ರೇಖೆ ಬಳಿ ಗ್ರಾಮ ನಿರ್ಮಿಸಿ ನರಿ ಬುದ್ದಿ ತೋರಿಸಿದ ಚೀನಾ

ಭಾರತೀಯ ಸೇನೆಯು ಲಡಾಖ್ ಥಿಯೇಟರ್‍ನಲ್ಲಿ 14 ಕಾಪ್ರ್ಸ್ ಅನ್ನು ಬಲಪಡಿಸಲು ತನ್ನ ಭಯೋತ್ಪಾದನೆ ನಿಗ್ರಹ ರಾಷ್ಟ್ರೀಯ ರೈಫಲ್ಸ್ ಯೂನಿಫಾರ್ಮ್ ಫೋರ್ಸ್ ರಚನೆಗೆ ಮುಂದಾಗಿದೆ ಎಂದು ಕೂಡಾ ವರದಿ ಆಗಿದೆ. ಈ ನಿಟ್ಟಿನಲ್ಲಿ ಭಾರತೀಯ ಸೇನೆಯೂ ಕೂಡಾ ಲಡಾಖ್‍ನಲ್ಲಿ ಸೇನಾ ಬಲವನ್ನು ಅಧಿಕ ಮಾಡಿದೆ. ಭಾರತೀಯ ಪಡೆಯು ಯಾವುದೇ ಅಗತ್ಯ ಬಂದಲ್ಲಿ ಸೇನೆಯನ್ನು ಇನ್ನಷ್ಟು ಅಧಿಕ ಮಾಡುವ ಸಾಧ್ಯತೆ ಇದೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

suvarna gold
- Advertisement -

Related news

error: Content is protected !!