ವಿಟ್ಲ : ಶ್ರೀ ದುರ್ಗಾ ಕಲಾತಂಡದ ಪುಗರ್ತೆ ಕಲಾವಿದರು (ರಿ), ವಿಟ್ಲ ಮೈರ ಕೇಪು ಇವರ ನೂತನ ನಾಟಕ “ಕಾಲ ಭೈರವಿ”ಯ ಶುಭ ಮುಹೂರ್ತ ಹಾಗೂ ಶೀರ್ಷಿಕೆ ಬಿಡುಗಡೆ ಕಾರ್ಯಕ್ರಮವು ದಿನಾಂಕ 21-06-2026 ರಂದು ಕೇಪು ಗ್ರಾಮದ ಶ್ರೀ ಸುಬ್ರಾಯ ದೇವಸ್ಥಾನದಲ್ಲಿ ಭಕ್ತಿಭಾವದಿಂದ ನೆರವೇರಿತು.

ಕಾರ್ಯಕ್ರಮದಲ್ಲಿ ವಿಟ್ಲ ಅರಮನೆಯ ಕೃಷ್ಣಯ್ಯ ಕೆ., ದುರ್ಗಾಮಿತ್ರವೃಂದದ ಅಧ್ಯಕ್ಷ ಪುರುಷೋತ್ತಮ ಗೌಡ ಕಲ್ಲಂಗಳ, ಶಿಸ್ತು ಸಮಿತಿ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ಬೆಂಗ್ರೋಡಿ, ಸಂಘಟನಾ ಕಾರ್ಯದರ್ಶಿ ಹಾಗೂ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸುಧಾಕರ್ ಪೂಜಾರಿ ಬಡೆಕೋಡಿ, ಸದಸ್ಯರಾದ ರಾಜೇಶ್ ಕರವೀರ, ಪುಗರ್ತೆ ಕಲಾವಿದರು ತಂಡದ ಅಧ್ಯಕ್ಷ ಪದ್ಮನಾಭ ಕಲ್ಲಂಗಳ, ನಿರ್ದೇಶಕ ಕಲಾತಪಸ್ವಿ ನಿತಿನ್ ಹೊಸಂಗಡಿ, ಸಂಚಾಲಕ ರಾಜೇಶ್ ಪುಚ್ಚಗುತ್ತು, ವ್ಯವಸ್ಥಾಪಕ ಶ್ರೇಯಸ್ ಪಾಟಾಳಿ ಕೇಪು ಸೇರಿದಂತೆ ತಂಡದ ಕಲಾವಿದರು, ಹಿನ್ನಲೆ ಸಂಗೀತಗಾರರು, ತಾಂತ್ರಿಕ ವಿಭಾಗದ ಸದಸ್ಯರು, ಸೆಟ್ಟಿಂಗ್ ಹಾಗೂ ವೇದಿಕೆ ನಿರ್ಮಾಣ ಕಾರ್ಯಕರ್ತರು, ಲೈಟ್ ಮತ್ತು ಸೌಂಡ್ ತಂತ್ರಜ್ಞರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ನೂತನ ನಾಟಕ ‘ಕಾಲ ಭೈರವಿ”ಯ ಶೀರ್ಷಿಕೆಯನ್ನು ಅನಾವರಣಗೊಳಿಸಿ, ನಾಟಕದ ಯಶಸ್ವಿ ಪ್ರದರ್ಶನಕ್ಕಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಬಳಿಕ ತಂಡದ ಸದಸ್ಯರು ಹಾಗೂ ಗಣ್ಯರು ನಾಟಕದ ಯಶಸ್ಸಿಗೆ ಶುಭ ಹಾರೈಸಿದರು.ಸಾಂಸ್ಕೃತಿಕ ಹಾಗೂ ರಂಗಭೂಮಿ ಕ್ಷೇತ್ರದಲ್ಲಿ ಮತ್ತೊಂದು ಮಹತ್ವದ ಹೆಜ್ಜೆಯಾಗಿ “ಕಾಲ ಭೈರವಿ” ನಾಟಕ ಮೂಡಿಬರಲಿದ್ದು, ಕಲಾರಸಿಕರಲ್ಲಿ ಈಗಾಗಲೇ ಕುತೂಹಲ ಮೂಡಿಸಿದೆ.








