Thursday, June 18, 2026
spot_imgspot_img
spot_imgspot_img

6 ವರ್ಷಗಳಿಂದ ಡ್ರಗ್ಸ್ ದಂಧೆಯಲ್ಲಿ ತೊಡಗಿದ್ದ ಕಿಂಗ್ ಪಿನ್ ಅನಿಕಾ

- Advertisement -
- Advertisement -

ಬೆಂಗಳೂರಿನಲ್ಲಿ ಡ್ರಗ್ಸ್ ಜಾಲ ಪತ್ತೆ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ಮುಂದುವರಿದಿದೆ. ಪ್ರಕರಣದ ಕಿಂಗ್ ಪಿನ್ ಆಗಿರುವ ಅನಿಕಾ ಕಳೆದ 6 ವರ್ಷಗಳಿಂದ ಡ್ರಗ್ಸ್ ದಂಧೆಯಲ್ಲಿ ತೊಡಗಿದ್ದಳು ಎಂದು ತನಿಖೆ ವೇಳೆ ಬಯಲಾಗಿದೆ.

ನಗರದ ಪ್ರತಿಷ್ಠಿತ ಕಾಲೇಜು ವಿದ್ಯಾರ್ಥಿನಿಯಾಗಿದ್ದ ಅನಿಕಾ ಡ್ರಗ್ಸ್ ಸರಬರಾಜು ಮಾಡಲು ದಂಧೆಯಲ್ಲಿ ತೊಡಗಿದ್ದಳು. ಈಕೆ ಕೂಡ ಡ್ರಗ್ಸ್ ಅಡಿಕ್ಟ್ ಅನ್ನೋದು ತಿಳಿದುಬಂದಿದೆ. ಬಂಧನವ ವೇಳೆ ಈಕೆ ಕೂಡ ಡ್ರಗ್ಸ್ ಸೇವೆ ಮಾಡಿದ್ದಳು. 10 ಗಂಟೆಗಳ ಬಳಿಕ ಆಕೆ ನಶೆಯಿಂದ ಹೊರಬಂದಿದ್ದಾಳೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿ ಅಧಿಕಾರಿಗಳು ಕಿಂಗ್ ಪಿನ್ ಅನಿಕಾಳನ್ನು ವಿಚಾರಣೆ ನಡೆಸುತ್ತಿದ್ದಾರೆ.

- Advertisement -

Related news

error: Content is protected !!