Wednesday, May 22, 2024
spot_imgspot_img
spot_imgspot_img

ನಿಂಬೂ ಶರಬತ್‌ನಿಂದ ಆರೋಗ್ಯಕ್ಕೆ 7 ಲಾಭ

- Advertisement -G L Acharya panikkar
- Advertisement -

ನಿಮ್ಮ ದಿನಚರಿ ಲೆಮನ್ ವಾಟರ್‌ನಿಂದ ಪ್ರಾರಂಭವಾಗುತ್ತಿದೆಯೇ? ಇಲ್ಲ ಅಂದರೆ ಇಂದಿನಿಂದಲೇ ಪ್ರಾರಂಭಿಸಿ. ಒಂದು ಲೋಟ ಬಿಸಿ ನೀರಿಗೆ ಸ್ವಲ್ಪ ಅರ್ಧ ಚಮಚ ನಿಂಬೆರಸ ಸೇರಿಸಿದರೆ ಆ ನೀರು ಅದ್ಭುತವಾದ ಔಷಧೀಯ ಗುಣವನ್ನು ಪಡೆದುಕೊಂಡು ನಿಮ್ಮ ದೇಹದ ಮೇಲೆ ಈ ರೀತಿಯ ಪರಿಣಾಮ ಬೀರುತ್ತದೆ

ಜೀರ್ಣಕ್ರಿಯೆಗೆ ಸಹಕಾರಿ: ಖಾಲಿ ಹೊಟ್ಟೆಯಲ್ಲಿ ನಿಂಬು ಪಾನೀಯ ತೆಗೆದುಕೊಳ್ಳುವುದರಿಂದ ಜೀರ್ಣಕ್ರಿಯೆ ಚೆನ್ನಾಗಿ ನಡೆಯುತ್ತದೆ, ಎದೆ ಉರಿ ಸಮಸ್ಯೆ ಕಡಿಮೆಯಾಗುವುದು.

ಲಿವರ್ ಆರೋಗ್ಯಕ್ಕೆ: ಇದರಲ್ಲಿರುವ ಸಿಟ್ರಿಕ್ ಆಸಿಡ್ ಲಿವರ್‌ನಲ್ಲಿರುವ ಕಲ್ಮಶವನ್ನು ತೆಗದು ಹಾಕಿ ಆರೋಗ್ಯವಾಗಿ ಇರುವಂತೆ ನೋಡಿಕೊಳ್ಳುತ್ತದೆ.

ದೇಹದಲ್ಲಿ pH ಸಮತೋಲನಕ್ಕೆ: ನಮ್ಮ ದೇಹದಲ್ಲಿ ಅಸಿಡಿಟಿ ಸಮಸ್ಯೆ ಬರದಂತೆ ತಡೆಯುವಲ್ಲಿ ನಿಂಬು ಪಾನೀಯ ಸಹಾಯ ಮಾಡುತ್ತದೆ. ನಾನ್‌ವೆಜ್‌ ಆಹಾರ ಸೇವನೆ ಮಾಡಿದ ಬಳಿಕ ಬಿಸಿ ನೀರಿಗೆ ನಿಂಬೆರಸ ಹಾಕಿ ಕುಡಿಯುವುದರಿಂದ ರಕ್ತದಲ್ಲಿ pH ಸಮತೋಲನದಲ್ಲಿಡಬಹುದು. ಅಲ್ಲದೆ ಈ ವಿಧಾನ ಉರಿಮೂತ್ರ ಸಮಸ್ಯೆಗೂ ಒಂದು ಉತ್ತಮ ಪರಿಹಾರ.

ರೋಗ ನಿರೋಧಕ ಶಕ್ತಿ ಹೆಚ್ಚುವುದು: ಶೀತದ ವಿರುದ್ಧ ಹೋರಾಡುವಲ್ಲಿ ಸಿಟ್ರಸ್ ಅಂಶವಿರುವ ಆಹಾರಗಳು ತುಂಬಾ ಪರಿಣಾಮಕಾರಿ. ಈ ಪಾನೀಯದಲ್ಲಿ ಸಿಟ್ರಸ್‌ ಅಂಶ ಹೆಚ್ಚಾಗಿ ಇರುವುದರಿಂದ ನೆಗಡಿ-ಶೀತ ಇವುಗಳ ವಿರುದ್ಧ ಹೋರಾಡುವ ಶಕ್ತಿಯನ್ನು ದೇಹಕ್ಕೆ ತುಂಬುತ್ತದೆ.

ತ್ವಚೆ ಆರೈಕೆ: ತ್ವಚೆ ಸೌಂದರ್ಯಕ್ಕೆ ಬರೀ ಬಾಹ್ಯ ಆರೈಕೆ ಮಾತ್ರವಲ್ಲ, ಆಹಾರಕ್ರಮದಲ್ಲಿ ನಿಗಾವಹಿಸಬೇಕು. ಈ ಪಾನೀಯ ರಕ್ತವನ್ನು ಶುದ್ಧೀಕರಿಸುವುದರಿಂದ ತ್ವಚೆ ಕಾಂತಿ ಹೆಚ್ಚುವುದು.

ಕೊಬ್ಬು ಕರಗಿಸಲು: ಕೊಬ್ಬನ್ನು ಕರಗಿಸುವಲ್ಲಿ ಈ ಪಾನೀಯ ತುಂಬಾ ಸಹಾಯಕಾರಿ.

ಬಾಯಿ ದುರ್ಗಂಧ ತಡೆಯುತ್ತದೆ: ಈ ಜ್ಯೂಸ್ ಕುಡಿಯುವುದರಿಂದ ಬಾಯಿ ದುರ್ಗಂಧವನ್ನು ತಡೆಯಬಹುದು.

- Advertisement -

Related news

error: Content is protected !!