Tuesday, November 3, 2026
spot_imgspot_img
spot_imgspot_img

ಹಣ್ಣಿನ ಪ್ಯಾಕಿಂಗ್ ಕೆಲಸದ ಆಮಿಷ: ಭಾರತೀಯ ಯುವಕನನ್ನು ರಷ್ಯಾ ಸೇನೆಗೆ ಸೇರಿಸಿದ ಆರೋಪ

- Advertisement -
- Advertisement -

ವಿಶಾಖಪಟ್ಟಣ: ಹಣ್ಣಿನ ಪ್ಯಾಕಿಂಗ್ ಕೆಲಸದ ನಿರೀಕ್ಷೆಯಲ್ಲಿ ರಷ್ಯಾಕ್ಕೆ ತೆರಳಿದ್ದ ಆಂಧ್ರಪ್ರದೇಶದ ಜೆ. ವಂಶಿ ಎಂಬ ಯುವಕನನ್ನು ವಂಚಿಸಿ ರಷ್ಯಾ ಸೇನೆಗೆ ಸೇರಿಸಿ, ಉಕ್ರೇನ್ ಗಡಿ ಭಾಗದ ಯುದ್ಧ ಪ್ರದೇಶಕ್ಕೆ ಕಳುಹಿಸಲಾಗುತ್ತಿದೆ ಎಂದು ಆರೋಪಿಸಲಾಗಿದೆ.

ನೇಪಾಳ ಮೂಲದ ವ್ಯಕ್ತಿಯೊಬ್ಬ ಹೆಚ್ಚಿನ ಸಂಬಳದ ಉದ್ಯೋಗದ ಆಮಿಷವೊಡ್ಡಿ ಯುವಕನನ್ನು ಸೇನೆಗೆ ಸೇರಿಸಿದ್ದಾನೆ ಎನ್ನಲಾಗಿದೆ. ಇದೀಗ ಜೀವಭಯದಲ್ಲಿರುವ ವಂಶಿ, ವಿಡಿಯೊ ಮೂಲಕ ಭಾರತ ಸರಕಾರದ ನೆರವು ಕೋರಿದ್ದಾರೆ.

ಮಗನನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರಲು ಕೇಂದ್ರ ಮತ್ತು ಆಂಧ್ರಪ್ರದೇಶ ಸರಕಾರಗಳು ತಕ್ಷಣ ಮಧ್ಯಪ್ರವೇಶಿಸಬೇಕು ಎಂದು ತಾಯಿ ಜೆ. ಅಪ್ಪಲಕೊಂಡ ಮನವಿ ಮಾಡಿದ್ದಾರೆ. ಈ ಕುರಿತು ಸ್ಪಂದಿಸಿರುವ ಸಚಿವ ನಾರಾ ಲೋಕೇಶ್, ಯುವಕನನ್ನು ವಾಪಸ್ ಕರೆತರಲು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸುವುದಾಗಿ ತಿಳಿಸಿದ್ದಾರೆ.

- Advertisement -

Related news

error: Content is protected !!