Tuesday, April 16, 2024
spot_imgspot_img
spot_imgspot_img

75ನೇ ಸ್ವಾತಂತ್ರೋತ್ಸವ ಸಂಭ್ರಮಕ್ಕೆ ಪ್ರಧಾನಿ ಮೋದಿಯವರಿಂದ 75 ಡಿಜಿಟಲ್ ಬ್ಯಾಂಕಿಂಗ್ ಯೂನಿಟ್ ಉದ್ಘಾಟನೆ

- Advertisement -G L Acharya panikkar
- Advertisement -

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು 75ನೇ ಸ್ವಾತಂತ್ರೋತ್ಸವ ಪ್ರಯುಕ್ತ ಆಗಸ್ಟ್ 15ನೇ ತಾರೀಕಿನಂದು 75 ಜಿಲ್ಲೆಗಳಲ್ಲಿ 75 ಡಿಜಿಟಲ್ ಬ್ಯಾಂಕಿಂಗ್ ಯೂನಿಟ್‌ಗಳನ್ನು ಉದ್ಘಾಟನೆ ಮಾಡಲಿದ್ದಾರೆ ಎಂದು ವರದಿಗಳು ತಿಳಿಸಿವೆ. ಈ ಘಟಕಗಳು ಒಟ್ಟಾರೆಯಾಗಿ ಕಾಗದರಹಿತವಾಗಿ ಇರುತ್ತವೆ. ಮತ್ತು ಇವುಗಳನ್ನು ಡಿಜಿಟಲ್ ಆರ್ಥಿಕ ಸಾಕ್ಷರತಾ ಕೇಂದ್ರಗಳನ್ನಾಗಿ ಬಳಸಿಕೊಳ್ಳಲಾಗುವುದು. ಕೇಂದ್ರದಿಂದ 75 ಜಿಲ್ಲೆಗಳ ಹೆಸರನ್ನು ಅಂತಿಮಗೊಳಿಸಲಾಗಿದೆ. ಮೂಲಸೌಕರ್ಯ ಒದಗಿಸಲು ಹಾಗೂ ಡಿಜಿಟಲ್ ಬ್ಯಾಂಕಿಂಗ್ ಯೂನಿಟ್‌ಗಳ ಸಿಬ್ಬಂದಿಗೆ ತರಬೇತಿ ನೀಡುವಂತೆ ಬ್ಯಾಂಕ್ ಗಳಿಗೆ ತಿಳಿಸಲಾಗಿದೆ.

ಡಿಜಿಟಲ್ ಬ್ಯಾಂಕಿಂಗ್ ಯೂನಿಟ್‌ಗಳನ್ನು ಸ್ಥಾಪಿಸಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ಏಪ್ರಿಲ್ 8ನೇ ತಾರೀಕಿನಂದು ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆ ಮಾಡಿದೆ. ಬಜೆಟ್‌ನಲ್ಲಿ ಘೋಷಣೆ ಮಾಡಿದ ಬೆನ್ನಿಗೆ ತೆಗೆದುಕೊಂಡಿರುವ ತೀರ್ಮಾನ ಇದು ಡಿಬಿಯು ಎಂಬುದು ವಿಶೇಷವಾಗಿ ರೂಪುಗೊಂಡ ಬಿಜಿನೆಸ್ ಯೂನಿಟ್/ಹಬ್. ಅಲ್ಲಿ ಕೆಲವು ಡಿಜಿಟಲ್ ಮೂಲಸೌಕರ್ಯ ಇರುತ್ತದೆ. ಡಿಜಿಟಲ್ ಬ್ಯಾಂಕಿಂಗ್ ಉತ್ಪನ್ನಗಳು ಹಾಗೂ ಸೇವೆಗಳನ್ನು ಒದಗಿಸುವುದಕ್ಕೆ ಬೇಕಾದಷ್ಟು ಸವಲತ್ತು ಇರುತ್ತದೆ. ಡಿಬಿಯು ಉದ್ದೇಶ ಏನೆಂದರೆ, ಡಿಜಿಟಲ್ ಹಣಕಾಸು ಸೇವೆ ವಿಸ್ತರಣೆ ಮತ್ತು ಆರ್ಥಿಕ ಒಳಗೊಳ್ಳುವಿಕೆ.

ಮಾರ್ಗದರ್ಶಿ ಸೂತ್ರದ ಪ್ರಕಾರ, ಶೆಡ್ಯೂಲ್ ವಾಣಿಜ್ಯ ಬ್ಯಾಂಕ್‌ಗಳಾಗಿದ್ದು, ಈ ಹಿಂದಿನ ಡಿಜಿಟಲ್ ಬ್ಯಾಂಕಿಂಗ್ ಅನುಭವ ಇದ್ದಲ್ಲಿ ಟಯರ್ 1ರಿಂದ ಟಯರ್ 6 ಕೇಂದ್ರಗಳಲ್ಲಿ ಡಿಬಿಯುಗಳನ್ನು ತೆರೆಯಲು ಅನುಮತಿಸಲಾಗುತ್ತದೆ. ಪ್ರತಿ ಪ್ರಕರಣದಲ್ಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಅನುಮತಿ ಬೇಕಾಗುವುದಿಲ್ಲ. ಬ್ಯಾಂಕ್‌ಗಳ ಡಿಬಿಯುಗಳನ್ನು ಬ್ಯಾಂಕ್‌ಗಳ ಔಟ್‌ಲೆಟ್ ಗಳಂತೆ ಪರಿಗಣಿಸಲಾಗುತ್ತದೆ ಎಂದು ಆರ್‌ಬಿಐ ಹೇಳಿದೆ. ಈಗಿರುವ ಬ್ಯಾಂಕಿಂಗ್ ಔಟ್‌ಲೆಟ್ ಗಿಂತ ಫಾರ್ಮಾಟ್‌ನಲ್ಲಿ ರಚನೆಯಲ್ಲಿ ಪ್ರತ್ಯೇಕವಾಗಿರುತ್ತದೆ. ಡಿಜಿಟಲ್ ಬ್ಯಾಂಕಿಂಗ್ ಬಳಕೆದಾರರಿಗೆ ಸೂಕ್ತವಾಗಿರುತ್ತದೆ.

- Advertisement -

Related news

error: Content is protected !!