Monday, August 31, 2026
spot_imgspot_img
spot_imgspot_img

ಬೆಳ್ತಂಗಡಿ: ಭ್ರಷ್ಟಾಚಾರ ಪ್ರಕರಣ: ಎಸ್‌ಐಟಿಯಲ್ಲಿದ್ದ ಸಬ್ ಇನ್ಸ್‌ಪೆಕ್ಟ‌ರ್ ವಿನೋದ್ ರೆಡ್ಡಿ ಅಮಾನತು

- Advertisement -
- Advertisement -

ಬೆಳ್ತಂಗಡಿ : ಬುರುಡೆ ಪ್ರಕರಣ ಸಂಬಂಧ ಬೆಳ್ತಂಗಡಿ ವಿಶೇಷ ತನಿಖಾ ದಳ (ಎಸ್‌ಐಟಿ)ಯಲ್ಲಿ ಒಂದು ವರ್ಷದಿಂದ ಕರ್ತವ್ಯ ಮಾಡುತ್ತಿದ್ದ ಈ ಹಿಂದೆ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ಪೊಲೀಸ್‌ ಠಾಣೆಯಲ್ಲಿ ಸಬ್ ಇನ್ಸ್‌ಪೆಕ್ಟ‌ರ್ ಆಗಿ ಬಳಿಕ ಮುಂಡಗೋಡ ಪೊಲೀಸ್ ಠಾಣೆಗೆ ವರ್ಗಾವಣೆಯಾಗಿರುವ ವಿನೋದ್ ರೆಡ್ಡಿಯನ್ನು ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಆ.31ರಂದು ಅಮಾನತು ಮಾಡಲಾಗಿದೆ.

ವರ್ಗಾವಣೆ ವಿಚಾರವಾಗಿ ಡೀಲಿಂಗ್ ಹಾಗೂ ತಿಂಗಳ ಮಾಮೂಲಿ ವಿಚಾರದಲ್ಲಿ ಮಾತನಾಡಿದ ಆಡಿಯೋ ವೈರಲ್ ಆದ ಬೆನ್ನಲ್ಲೇ ಉತ್ತರ ಕನ್ನಡ ಜಿಲ್ಲಾ ಎಸ್ಪಿ ದೀಪನ್.ಎಂ.ಎನ್ ಅವರು ಪಿಎಸ್‌ಐ ಕಿರಣ್ ಪಾಟೀಲ್‌, ಪಿಎಸ್‌ಐ ಕೃಷ್ಟಾ ಅರಿಕೆರೆ, ಪಿಎಸ್‌ಐ ವಿನೋದ್ ರೆಡ್ಡಿ ಸೇರಿ ಮೂವರನ್ನು ಆ.31 ರಂದು ಪ್ರಾಥಮಿಕ ತನಿಖೆ ನಡೆಸಿ ಅಮಾನತು ಮಾಡಲಾಗಿದೆ.
ಹಳಿಯಾಳ ಪೊಲೀಸ್‌ ಠಾಣೆಯಿಂದ ಮುಂಡಗೋಡ ಪೊಲೀಸ್‌ ಠಾಣೆಗೆ ವರ್ಗಾವಣೆಯಾಗಿದ್ದರೂ ಸರಕಾರ ವಿಶೇಷ ತನಿಖಾ ದಳ ರಚನೆಯಾದ ದಿನದಿಂದ ವಿನೋದ್ ರೆಡ್ಡಿ ಈವರೆಗೂ ಬೆಳ್ತಂಗಡಿಯಲ್ಲಿ ಎಸ್‌ಐಟಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.

- Advertisement -

Related news

error: Content is protected !!