Tuesday, July 21, 2026
spot_imgspot_img
spot_imgspot_img

ಬಂಧನ ಭೀತಿಯಿಂದ 99 ಲಕ್ಷ ವರ್ಗಾವಣೆ – ಗುಜರಾತ್‌ನಲ್ಲಿ ಸೈಬರ್ ವಂಚಕರ ಕೃತ್ಯ

- Advertisement -
- Advertisement -

ಗಾಂಧಿನಗರ: ಗುಜರಾತ್‌ನ ಗಾಂಧಿನಗರದ 65 ವರ್ಷದ ನಿವೃತ್ತ ಶಾಲಾ ಶಿಕ್ಷಕಿಯೋರ್ವರನ್ನು ಸೈಬ‌ರ್ ವಂಚಕರು ಸುಮಾರು ಒಂದು ತಿಂಗಳ ಕಾಲ ‘ಡಿಜಿಟಲ್ ಅರೆಸ್ಟ್‌’ನಲ್ಲಿ ಇರಿಸಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.ಕೇಂದ್ರ ತನಿಖಾಧಿಕಾರಿಗಳೆಂದು ಹೇಳಿಕೊಂಡ ಸೈಬರ್ ವಂಚಕರು ಅವರಿಗೆ 99 ಲಕ್ಷ ರೂ. ವಂಚಿಸಿದ್ದಾರೆ ಎಂದು ಅವರು ಹೇಳಿದ್ದಾರೆ. ಈ ಪ್ರಕರಣವನ್ನು ಈಗ ಗಾಂಧಿನಗರ ವಲಯ ಸೈಬರ್ ಕ್ರೈಮ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ದೂರಿನ ಪ್ರಕಾರ, ಗಾಂಧಿನಗರದ ಸೆಕ್ಟರ್ 8ರ ನಿವಾಸಿಯಾಗಿರುವ ಮಹಿಳೆ ಜನವರಿ 16ರಂದು ಅಪರಿಚಿತ ಸಂಖ್ಯೆಯಿಂದ ಫೋನ್ ಕರೆ ಸ್ವೀಕರಿಸಿದ್ದರು. ಕರೆ ಮಾಡಿದವರು “ನಿಮ್ಮ ಹೆಸರಿನಲ್ಲಿ ನೀಡಲಾದ ಸಿಮ್ ಕಾರ್ಡ್ ಅನ್ನು ಕಾನೂನುಬಾಹಿರ ಚಟುವಟಿಕೆಗಳು ಹಾಗೂ ಬೆದರಿಕೆ ಕರೆಗಳಿಗೆ ಬಳಸಲಾಗುತ್ತಿದೆ” ಎಂದು ಹೇಳಿದ್ದಾರೆ.ಸ್ವಲ್ಪ ಸಮಯದ ನಂತರ ಅಜಯ್ ಗುಪ್ತಾ ಎಂದು ಗುರುತಿಸಿಕೊಂಡ ವ್ಯಕ್ತಿಯೊಬ್ಬ ಮಹಿಳೆಯನ್ನು ವೀಡಿಯೊ ಕರೆಯ ಮೂಲಕ ಸಂಪರ್ಕಿಸಿದ್ದಾನೆ.

ಅಲ್ಲದೆ, ತಾನು ಸಿಬಿಐ ಅಧಿಕಾರಿ ಎಂದು ತಿಳಿಸಿದ್ದಾನೆ.”ನಿಮ್ಮ ಬ್ಯಾಂಕ್ ಖಾತೆಗಳು ಆರೋಪಿ ವ್ಯಕ್ತಿಯೋರ್ವನ ಹಣ ಅಕ್ರಮ ವರ್ಗಾವಣೆ ತನಿಖೆಗೆ ಸಂಬಂಧಿಸಿವೆ” ಎಂದು ಕರೆ ಮಾಡಿದವನು ಹೇಳಿದ್ದಾನೆ. “ನಿಮ್ಮನ್ನು ಶೀಘ್ರದಲ್ಲಿ ಬಂಧಿಸಬಹುದು” ಎಂದು ಆತ ಎಚ್ಚರಿಸಿದ್ದಾನೆ.”ನಿಮ್ಮ ಹಣಕಾಸು ವ್ಯವಹಾರ ಪರಿಶೀಲಿಸಬೇಕು. ನಿಮ್ಮವಿರುದ್ಧ ಕಾನೂನು ಕ್ರಮ ಕೈಗೊಳ್ಳದೇ ಇರಲು ನಿಮ್ಮ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ಅಂಚೆ ಕಚೇರಿಗಳಿಂದ ಹಲವು ಬ್ಯಾಂಕ್‌ಗಳಿಗೆ ಹಣ ವರ್ಗಾಯಿಸಬೇಕು” ಎಂದು ವಂಚಕರು ಮಹಿಳೆಗೆ ಒತ್ತಡ ಹೇರಿದ್ದಾರೆ. ಫೆಬ್ರವರಿ 5 ಹಾಗೂ ಫೆಬ್ರವರಿ 13ರ ನಡುವೆ ಆರ್‌ಟಿಜಿಎಸ್ ಮೂಲಕ ವಂಚಕರು ಹಣ ವರ್ಗಾಯಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.ಕಾನೂನು ಕ್ರಮದ ಭೀತಿಯಿಂದ ನಿವೃತ್ತ ಶಿಕ್ಷಕಿ ಈ ಅವಧಿಯಲ್ಲಿ ಒಟ್ಟು 99 ಲಕ್ಷ ರೂ. ವರ್ಗಾಯಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -

Related news

error: Content is protected !!