- Advertisement -
- Advertisement -



ವಿಟ್ಲ ಕಸಬಾ ಗ್ರಾಮದ ಒಕ್ಕೆತ್ತೂರು ಇಮ್ತಿಯಾಝ್ ಎಂಬಾತನು ಕಳೆದ ಕೆಲ ತಿಂಗಳುಗಳ ಹಿಂದೆ ಕೊಳೆತ ಮಾಂಸವನ್ನು ಬಿಸಾಡುವಾಗ ಗ್ರಾಮಸ್ಥರು, ಈತನ ಫೋಟೋ ಸಮೇತ ತೆಗೆದು, ಸ್ಥಳೀಯ ಪೊಲೀಸ್ ಸ್ಟೇಷನ್ ಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದ ವಿಟ್ಲ ಪೊಲೀಸ್ ಠಾಣಾ ಪೊಲೀಸರು ಆತನ ವಾಹನವನ್ನು ವಶಕ್ಕೆ ಪಡೆದಿದ್ದಾರೆ. ನಂತರ ಈ ಪ್ರಕರಣವನ್ನು ವೀರಕಂಭ ಗ್ರಾಮ ಪಂಚಾಯತ್‌ಗೆ ಹಸ್ತಾಂತರಿಸಿದ್ದರು.
ತಕ್ಷಣವೇ ಕಾರ್ಯಪ್ರವೃತ್ತರಾದ ವೀರಕಂಭ ಗ್ರಾಮ ಪಂಚಯತ್‌ನ ಪಿಡಿಒ ಈತನಿಗೆ ರೂ. 8000/- ದಂಡ ವಿಧಿಸಿದ್ದಾರೆ. ದಂಡ ವಿಧಿಸಿದ ನಂತರ ಮತ್ತೆ ಈತ ವಿಟ್ಲ ಠಾಣೆಗೆ ಬಂದು ಪೊಲೀಸ್ ವಶದಲ್ಲಿದ್ದ ತನ್ನ ವಾಹನಕ್ಕೆ ಫೈನ್ ಕಟ್ಟಿ, ವಾಹನ ಬಿಡಿಸಿದ್ದಾನೆ. ವಿಟ್ಲ ಪೊಲೀಸರ ಮತ್ತು ವೀರಕಂಭ ಗ್ರಾಮ ಪಂಚಾಯತ್‌ನ ಈ ಕಾರ್ಯವೈಖರಿಗೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ಮುಂದೆ ಯಾವುದೇ ಕೊಳೆತ ತ್ಯಾಜ್ಯ ವಸ್ತು/ಮಾಂಸಗಳನ್ನು ರಸ್ತೆ ಬದಿಯಲ್ಲಿ ಬಿಸಾಡಿದರೆ ದಂಡ ಬೀಳುತ್ತೆ ಎಂಬ ಸಂದೇಶವನ್ನು ರವಾನಿಸಿದ್ದಾರೆ.
- Advertisement -








