Saturday, June 22, 2024
spot_imgspot_img
spot_imgspot_img

22 ರಾಜ್ಯಗಳಿಗೆ ಕೇಂದ್ರ ಸರ್ಕಾರದಿಂದ 890 ಕೋಟಿ ರೂ.ಆರ್ಥಿಕ ನೆರವು

- Advertisement -G L Acharya panikkar
- Advertisement -

ನವದೆಹಲಿ: ಕೊರೊನಾ ನಿಯಂತ್ರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಎರಡನೇ ಹಂತದಲ್ಲಿ 22 ರಾಜ್ಯಗಳಿಗೆ 890 ಕೋಟಿ ರೂ.ಆರ್ಥಿಕ ನೆರವು ನೀಡಿದೆ. ಕೊರೊನಾ ಸೋಂಕಿತರ ಸ್ಥಿತಿಗತಿ ಆಧರಿಸಿ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಆರ್ಥಿಕ ಪರಿಹಾರ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ಎರಡನೇ ಕಂತಿನಲ್ಲಿ ಆರ್ಥಿಕ ನೆರವು ಘೋಷಿಸಿದ ರಾಜ್ಯಗಳ ಪಟ್ಟಿಯಲ್ಲಿ ಛತ್ತೀಸ್ಗಡ, ಜಾರ್ಖಂಡ್, ಮಧ್ಯಪ್ರದೇಶ, ಒಡಿಶಾ, ರಾಜಸ್ಥಾನ, ತೆಲಂಗಾಣ, ಆಂಧ್ರಪ್ರದೇಶ, ಗೋವಾ, ಗುಜರಾತ್, ಕರ್ನಾಟಕ, ಕೇರಳ, ಪಂಜಾಬ್, ತಮಿಳುನಾಡು, ಪಶ್ಚಿಮ ಬಂಗಾಳ, ಅರುಣಾಚಲ ಪ್ರದೇಶ, ಅಸ್ಸಾಂ, ಮೇಘಲಯಾ , ಮಿಜೋರಾಂ ಮತ್ತು ಸಿಕ್ಕಿಂ ಇದೆ ಎಂದು ಸಚಿವಾಲಯ ತಿಳಿಸಿದೆ.

ಕೋವಿಡ್ -19 ಪ್ರತಿಕ್ರಿಯೆ ಮತ್ತು ನಿರ್ವಹಣೆಯನ್ನು ಕೇಂದ್ರವು ಮುನ್ನಡೆಸುತ್ತಿದೆ. ಮತ್ತು ತಾಂತ್ರಿಕ ಮತ್ತು ಆರ್ಥಿಕ ಸಂಪನ್ಮೂಲಗಳ ಮೂಲಕ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಬೆಂಬಲಿಸುವ ‘ಸಂಪೂರ್ಣ ಸರ್ಕಾರ’ ವಿಧಾನದ ಭಾಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಮಾ.24ರಂದು 15 ಸಾವಿರ ಕೋಟಿ ರೂ.ಘೋಷಿಸಿದ್ದರು. ಈ ಮೊದಲ ಕಂತಿನಲ್ಲಿ ಪ್ರತಿ ರಾಜ್ಯಗಳಿಗೆ 3 ಸಾವಿರ ಕೋಟಿ ಹಣವನ್ನು ನೀಡಲಾಗಿತ್ತು. ಆದರೆ ಈ 2ನೇ ಕಂತಿನ ಹಣದಲ್ಲಿ ಯಾವ ರಾಜ್ಯಕ್ಕೆ ಎಷ್ಟೆಷ್ಟು ಆರ್ಥಿಕ ಸಹಾಯ ಧನ ಎಂಬುದನ್ನು ತಿಳಿಸಿಲ್ಲ.

ಆದರೆ ಈ 2ನೇ ಹಂತದ ಕಂತಿನ ಹಣವನ್ನು ಆರ್ಟಿ-ಪಿಸಿಆರ್ ಯಂತ್ರಗಳು, ಆರ್ಎನ್ಎ ಹೊರತೆಗೆಯುವ ಕಿಟ್ಗಳು, ಐಸಿಯು ಹಾಸಿಗೆಗಳ ಚಿಕಿತ್ಸೆ ಮತ್ತು ಅಭಿವೃದ್ಧಿ ಮೂಲಸೌಕರ್ಯಗಳನ್ನು ಹೆಚ್ಚಿಸುವುದು, ಪರೀಕ್ಷೆಗೆ ಸಾರ್ವಜನಿಕ ಆರೋಗ್ಯ ಮೂಲಸೌಕರ್ಯಗಳನ್ನು ಬಲಪಡಿಸಲು ಬಳಸಲಾಗುತ್ತದೆ.

ಅಗತ್ಯ ಮಾನವ ಸಂಪನ್ಮೂಲ, ತರಬೇತಿ ಮತ್ತು ಸಾಮರ್ಥ್ಯವನ್ನು ಹೆಚ್ಚಿಸಲು ಮತ್ತು ಕೋವಿಡ್ -19 ಕರ್ತವ್ಯಗಳಲ್ಲಿ ಆಶಾ ಕಾರ್ಮಿಕರು ಸೇರಿದಂತೆ ಆರೋಗ್ಯ ಕಾರ್ಯಕರ್ತರು ಮತ್ತು ಸ್ವಯಂಸೇವಕರಿಗೆ ಪ್ರೋತ್ಸಾಹ ಧನಕ್ಕಾಗಿ ಇದನ್ನು ಬಳಸಲಾಗುವುದು ಎಂದು ಆರೋಗ್ಯ ಸಚಿವಾಲಯ ಹೇಳಿದೆ. ಅಗತ್ಯವಿರುವ ಕಡೆಗಳಲ್ಲಿ ಸ್ವಯಂಸೇವಕರು ಕೋವಿಡ್ ವಾರಿಯರ್ಸ್ ಪೋರ್ಟಲ್ನಲ್ಲಿ ನೋಂದಾಯಿಸಿಕೊಂಡಿದ್ದಾರೆ. ಹೀಗಾಗಿ ಅವರಿಗೂ ಪ್ರೋತ್ಸಾಹ ಧನ ನೀಡಲಾಗುವುದು ಎಂದು ತಿಳಿಸಿದೆ.

ಪರೀಕ್ಷಾ ಸೌಲಭ್ಯಗಳನ್ನು ಹೆಚ್ಚಿಸಲು, ಆಸ್ಪತ್ರೆಯ ಮೂಲಸೌಕರ್ಯಗಳನ್ನು ಹೆಚ್ಚಿಸಲು, ಅಗತ್ಯ ಉಪಕರಣಗಳು, ಔಷಧಗಳಿಗಾಗಿ ಏಪ್ರಿಲ್ನಲ್ಲಿ ಹಣ ಬಿಡುಗಡೆ ಮಾಡಲಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ಈ ಪ್ಯಾಕೇಜಿನ ಭಾಗವಾಗಿ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ್ಲಲಿ 5,80,342 ಪ್ರತ್ಯೇಕ ಹಾಸಿಗೆಗಳು, 1,36,068 ಆಮ್ಲಜನಕ ಬೆಂಬಲಿತ ಹಾಸಿಗೆಗಳು ಮತ್ತು 31,255 ಐಸಿಯು ಹಾಸಿಗೆಗಳನ್ನು ಬಲಪಡಿಸಲಾಗಿದೆ.

ಅಲ್ಲದೆ, 86,88,357 ಪರೀಕ್ಷಾ ಕಿಟ್ಗಳು ಮತ್ತು 79,88,366 ವೈಲ್ ಟ್ರಾನ್ಸ್ಪೋರ್ಟ್ ಮೀಡಿಯಾ (ವಿಟಿಎಂ) ಗಳನ್ನು ಸಂಗ್ರಹಿಸಲಾಗಿದೆ. 6,65,799 ಮಾನವ ಸಂಪನ್ಮೂಲಗಳಿಗೆ ಪ್ರೋತ್ಸಾಹ ನೀಡಲಾಗಿದೆ. ಪ್ಯಾಕೇಜ್ 11,821 ಸಿಬ್ಬಂದಿಗೆ ಚಲನಶೀಲತೆ ಬೆಂಬಲವನ್ನು ಒದಗಿಸಿದೆ ಎಂದು ಸಚಿವಾಲಯ ತಿಳಿಸಿದೆ.

- Advertisement -

Related news

error: Content is protected !!