ರಕ್ತಹೀನತೆಯಿಂದ ನರಳುವವರು ಕಡ್ಡಾಯವಾಗಿ ಬೀಟ್‌ರೂಟ್ ತಿನ್ನಬೇಕು. ಇದು ಹಿಮೋಗ್ಲೋಬಿನ್ ಪ್ರಮಾಣವನ್ನು ಹೆಚ್ಚಿಸುತ್ತದೆ. ಚರ್ಮ ಮತ್ತು ಕೂದಲಿಗೆ ಮನೆಮದ್ದಾಗಿ ಬೀಟ್ರೂಟ್ ರಸ ಬಳಕೆ ಮಾಡುವುದು ಸಾಮಾನ್ಯ. ಹಾಗೆಯೇ ಬೀಟ್ರೂಟ್ ನ್ನು ಆರೋಗ್ಯ ಸಮಸ್ಯೆ ನಿವಾರಣೆಗೆ ಮತ್ತು ಆರೋಗ್ಯ ವರ್ಧಕವಾಗಿ ಬಳಕೆ ಮಾಡಲಾಗುತ್ತದೆ. ಆದರೆ ಬೀಟ್ರೂಟ್ ಜ್ಯೂಸ್ ಸೇವನೆ ಮಾಡಿದರೆ ಅನೇಕ ಪ್ರಮುಖ ಆರೋಗ್ಯ ಸಮಸ್ಯೆ ತೊಡೆದು ಹಾಕಲು ಮತ್ತು ಅದು ನಿಮಗೆ ಉತ್ತಮ ಪರಿಹಾರ ನೀಡಲು ಸಹಾಯ ಮಾಡುತ್ತದೆ. ಸರಿಯಾದ ಪೋಷಕಾಂಶ ಇಲ್ಲದಿದ್ದರೆ ದೇಹವು ಹೆಚ್ಚು ಕಾಲ ಆರೋಗ್ಯ ಹೊಂದಲು ಸಾಧ್ಯವಿಲ್ಲ. ನೀವು ಬೀಟ್ರೂಟ್ ರಸ ಸೇವಿಸಿದರೆ ನಿಮ್ಮ ರೋಗ ನಿರೋಧಕ ವ್ಯವಸ್ಥೆ ಆರೋಗ್ಯವಾಗಿರಲು ಇದು ಸಹಾಯ ಮಾಡುತ್ತದೆ.
ಬೀಟ್ರೂಟ್ ಸೇವನೆ ದೀರ್ಘಕಾಲದವರೆಗೆ ಶಕ್ತಿ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಬೀಟ್ರೂಟ್ ರಸದಲ್ಲಿ ಸತು, ಸೋಡಿಯಂ, ಮೆಗ್ನೀಸಿಯಮ್, ಕಬ್ಬಿಣ ಮತ್ತು ಮ್ಯಾಂಗನೀಸ್, ಸೆಲೆನಿಯಮ್ ಹೇರಳವಾಗಿ ಇದೆ ಅಂತಾರೆ ಆಹಾರ ತಜ್ಞರು.ಕಡಿಮೆ ಕ್ಯಾಲೋರಿ ಬೀಟ್ರೂಟ್ ನಲ್ಲಿದೆ. ಇದು ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಬೀಟ್ರೂಟ್ ಜ್ಯೂಸ್ ತೂಕ ಹೆಚ್ಚಾಗುವುದನ್ನು ತಡೆಯುತ್ತದೆ. ಫೈಬರ್ ಭರಿತ ಬೀಟ್ರೂಟ್ ರಸದಲ್ಲಿ ಕ್ಯಾಲೋರಿ ಮತ್ತು ಕೊಬ್ಬಿನ ಪ್ರಮಾಣವು ಅತ್ಯಲ್ಪ ಎಂದು ಆಯುರ್ವೇದ ಹೇಳಿದೆ. ಹಾಗಾಗಿ ಉಪಹಾರ ಅಥವಾ ತೂಕ ನಷ್ಟ ಪಾನೀಯದಲ್ಲಿ ಬೀಟ್ರೂಟ್ ಸೇರಿಸಿ.
ಅನಾರೋಗ್ಯಕರ ಆಹಾರವು ಕೊಲೆಸ್ಟ್ರಾಲ್ ಮಟ್ಟ ಹೆಚ್ಚಿಸುತ್ತದೆ. ಇತರ ಆರೋಗ್ಯ ಸಮಸ್ಯೆ ಉಂಟಾಗುತ್ತವೆ. ಬೀಟ್ರೂಟ್ ಜ್ಯೂಸ್ ಕೊಲೆಸ್ಟ್ರಾಲ್ ಮಟ್ಟವನ್ನು ಸಮತೋಲನಗೊಳಿಸುತ್ತದೆ.ಯಕೃತ್ತಿನ ಆಕ್ಸಿಡೇಟಿವ್ ಒತ್ತಡ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಬೀಟ್ರೂಟ್ನಲ್ಲಿ ಫೈಟೊನ್ಯೂಟ್ರಿಯೆಂಟ್ಗಳ ಉಪಸ್ಥಿತಿಯಿದೆ. ಇದು ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ.
ಬೀಟ್ರೂಟ್ನಲ್ಲಿ ಕಂಡು ಬರುವ ಪೋಷಕಾಂಶಗಳು ಕ್ಯಾನ್ಸರ್ ಅಪಾಯ ಕಡಿಮೆ ಮಾಡಲು ಪ್ರಯೋಜನಕಾರಿ. ಆಂಟಿಆಕ್ಸಿಡೆಂಟ್ ಬೀಟಾಲೈನ್‌ಗಳು ಬೀಟ್ರೂಟ್ ಬಣ್ಣಕ್ಕೆ ಕಾರಣವಾಗಿದೆ. ಇದು ಕ್ಯಾನ್ಸರ್ ಕೋಶಗಳನ್ನು ನಿಲ್ಲಿಸುವ ಕೀಮೋಪ್ರೆವೆಂಟಿವ್ ಸಾಮರ್ಥ್ಯ ಹೊಂದಿದೆ. ಉತ್ಕರ್ಷಣ ನಿರೋಧಕವು ದೇಹದ ಕೆಟ್ಟ ಕೋಶಗಳನ್ನು ತೊಡೆದು ಹಾಕುತ್ತದೆ.