Friday, September 4, 2026
spot_imgspot_img
spot_imgspot_img

ಸೂರಿಕುಮೇರು : ರಾಷ್ಟ್ರೀಯ ಹೆದ್ದಾರಿಯಲ್ಲಿ ಕ್ರಾಸಿಂಗ್ ನೀಡುವಂತೆ ಒತ್ತಾಯಿಸಿ ಬೃಹತ್ ಪ್ರತಿಭಟನೆ

- Advertisement -
- Advertisement -

ಮಾಣಿ : ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ನಡೆಸುತ್ತಿರುವ ಹಿನ್ನೆಲೆಯಲ್ಲಿ ಸೂರಿಕುಮೇರು ಜಂಕ್ಷನ್ ಸಮೀಪ ಯಾವುದೇ ಕ್ರಾಸಿಂಗ್ ನೀಡದೆ ಸಂಪೂರ್ಣ ಬಂದ್ ಮಾಡಿರುವ ಹಿನ್ನೆಲೆಯಲ್ಲಿ ಬರಿಮಾರು ಮಹಮ್ಮಾಯಿ ದೇವಸ್ಥಾನ, ಸೂರಿಕುಮೇರು ಬದ್ರಿಯಾ ಜುಮ್ಮಾ ಮಸೀದಿ, ಮತ್ತು ಸೂರಿಕುಮೇರು ಸೈಂಟ್ ಜೋಸೆಫ್ ಚರ್ಚ್ ಸಂಪರ್ಕಿಸಲು ಹಾಗೂ ಬರಿಮಾರು ಸರಪಾಡಿ ಸಂಪರ್ಕ ಸೂರಿಕುಮೇರು ಕೋರ್ಯ, ಸಂಪರ್ಕ ಇನ್ನಿತರ ಒಳ ರಸ್ತೆಗಳ ಸಂಪರ್ಕವು ಕಷ್ಟಕರವಾಗಿರುವುದರಿಂದ ಜನರು ಮತ್ತು ವಾಹನ ಚಾಲಕರು ಸಂಕಷ್ಟದಲ್ಲಿದ್ದು, ಕೂಡಲೇ ಈ ಭಾಗದಲ್ಲಿ ಕ್ರಾಸಿಂಗ್ ನೀಡುವ ಮೂಲಕ ಸಮಸ್ಯೆ ಪರಿಹಾರಗೊಳಿಸಬೇಕು ಎಂದು ಒತ್ತಾಯಿಸಿ ಶುಕ್ರವಾರ ಬೆಳಿಗ್ಗೆ ಹತ್ತು ಗಂಟೆಗೆ ಸೂರಿಕುಮೇರು ಜಂಕ್ಷನ್ ಬಳಿ ಬೃಹತ್ ಪ್ರತಿಭಟನೆ ನಡೆಸಲಾಯಿತು.

ಒಂದೆರಡು ಕಿಲೋಮೀಟರ್ ಸುಮ್ಮನೆ ಮುಂದೆ ಹೋಗಿ ಕ್ರಾಸಿಂಗ್ ಮಾಡಿ ಬರಬೇಕಾದ ಅನಿವಾರ್ಯತೆ ಉಂಟಾಗಿರುವ ಕಾರಷ, ಇದರಿಂದ ಸೂರಿಕುಮೇರು ಬರಿಮಾರು ಪ್ರದೇಶದ ಜನತೆ ಮತ್ತು ವಾಹನ ಚಾಲಕರು ವಿದ್ಯಾರ್ಥಿಗಳು ಬಹಳ ಸಂಕಷ್ಟ ಪಡುತ್ತಿದ್ದು ಹಳೀರದಿಂದ ಸೂರಿಕುಮೇರು ಮಧ್ಯೆ ಎಲ್ಲಿಯೂ ಆಗಬಹುದು ಒಂದು ಕ್ರಾಸಿಂಗ್ ನೀಡಿ ಎಂದು ಪ್ರತಿಭಟನೆಯಲ್ಲಿ ಒತ್ತಾಯಿಸಲಾಯಿತು.

ಪ್ರತಿಭಟನೆಯಲ್ಲಿ ಮಾಣಿ ಗ್ರಾಮ ಪಂಚಾಯತ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ, ಸದಸ್ಯರು ಗಳಾದ ಬಾಲಕೃಷ್ಣ ಆಳ್ವ,ಮೆಲ್ವಿನ್ ಕಿಶೋರ್ ಮಾರ್ಟಿಸ್,ಪ್ರಮುಖರಾದ , ಹಸೈನ್ ಸಂಕ, ಕೃಷ್ಣಪ್ಪ, ವಸಂತ, ರೋನಿ ಬೋನಿಸ್, ಸತೀಶ್ ಪ್ರಭು, ಲಕ್ಷೀ ನಾರಾಯಣ, ಹನೀಫ್ ಸಂಕ, ಮುಜೀಬ್ ಸಹಿತ ನೂರಾರು ಸ್ಥಳೀಯ ಹಿಂದೂ ಮುಸ್ಲಿಂ ಕ್ರೈಸ್ತ ಮುಖಂಡರು ಹಿರಿಯ ನೇತಾರರು ಭಾಗವಹಿಸಿದರು. ತಿಂಗಳೊಳಗೆ ಸಮಸ್ಯೆ ಇತ್ಯರ್ಥಗೊಳಿಸದಿದ್ದಲ್ಲಿ ಪ್ರತಿಭಟನೆಯು ಗಂಭೀರ ಸ್ವರೂಪದಲ್ಲಿ ಮುಂದುವರಿಯುವುದು ಎಂದು ಎಚ್ಚರಿಕೆ ನೀಡಲಾಯಿತು. ಹೆದ್ದಾರಿ ಕಾಮಗಾರಿ ಇಲಾಖೆಯ ಪ್ರಮುಖ ಅಧಿಕಾರಿಗಳು ಇಂಜಿನಿಯರ್ ಗಳು ಆದ ಬಿನೋದ್, ಚಿದಾನಂದ ಅರ್ಜಿ ಸ್ವೀಕರಿಸಿ ಕೂಡಲೇ ಮೇಲಾಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆ ಇತ್ಯರ್ಥ ಮಾಡಲಾಗುವುದು ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆ ನಿಲ್ಲಿಸಲಾಯಿತು. ಸಾಕಷ್ಟು ಪೋಲಿಸರನ್ನು ನಿಯೋಜಿಸಿ ಪ್ರತಿಭಟನೆಗೆ ಅವಕಾಶ ನೀಡಲಾಗಿತ್ತು.

- Advertisement -

Related news

error: Content is protected !!