Friday, June 5, 2026
spot_imgspot_img
spot_imgspot_img

ಉಜಿರೆಯ ಯುವಕನ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಶ್ರೀರಸ್ತು ಶುಭಮಸ್ತು ಧಾರಾವಾಹಿಯ ನಟಿ ದೀಪಾ ಕಟ್ಟೆ

- Advertisement -
- Advertisement -

ಮಿಥುನರಾಶಿ, ಶ್ರೀರಸ್ತು ಶುಭಮಸ್ತು ಧಾರಾವಾಹಿ ಖ್ಯಾತಿಯ ನಟಿ ದೀಪಾ ಕಟ್ಟೆ ಹೊಸ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಬೆಳ್ತಂಗಡಿಯ ಉಜಿರೆಯಲ್ಲಿ ನಟಿ ದೀಪಾ ಕಟ್ಟೆ ಹಸೆಮಣೆ ಏರಿದ್ದಾರೆ.

ಮಿಥುನರಾಶಿ ಹಾಗೂ ಶ್ರೀರಸ್ತು ಶುಭಮಸ್ತು ಇನ್ನು ಹಲವು ಸೀರಿಯಲ್​ನಲ್ಲಿ ನಟಿಸಿದ ನಟಿ ದೀಪಾ ಅವರು ಮೇ 22ರಂದು ಸಾಫ್ಟ್‌ವೇರ್ ಇಂಜಿನಿಯರ್ ರಕ್ಷಿತ್ ಯಡಪಡಿತ್ತಾಯ ಜೊತೆ ಬೆಳ್ತಂಗಡಿ ಉಜಿರೆಯ ಜನಾರ್ಧನ ಸ್ವಾಮಿ ದೇವಸ್ಥಾನದ ಕೃಷ್ಣಾನುಗ್ರಹ ಸಭಾ ಗೃಹದಲ್ಲಿ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಇನ್ನು ಅರಿಶಿನ ಶಾಸ್ತ್ರ, ಮೆಹೆಂದಿ ಶಾಸ್ತ್ರದ ಫೋಟೋಗಳನ್ನು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಶೇರ್​ ಮಾಡಿಕೊಂಡಿದ್ದರು. ಇನ್ನು ನಟಿ ದೀಪಾ ಮದುವೆ ಸಮಾರಂಭಕ್ಕೆ ಸೀರಿಯಲ್ ತಾರಾ ಬಳಗ ಬಂದು ನವ ಜೋಡಿಗೆ ಶುಭ ಕೋರಿದ್ದಾರೆ.

- Advertisement -

Related news

error: Content is protected !!