Saturday, September 19, 2026
spot_imgspot_img
spot_imgspot_img

ಪ್ರೀತಿಸಿ ಮದ್ವೆಯಾಗಿ 6 ವರ್ಷ ಸಂಸಾರ ನಡೆಸಿದ ಪತಿ ಏಕಾಏಕಿ ನಾಪತ್ತೆ: ಕಂಗಾಲಾದ ಪತ್ನಿ

- Advertisement -
- Advertisement -
vtv vitla

ಪ್ರೀತಿಸಿ ಮದುವೆಯಾಗಿ, ಆರು ವರ್ಷಗಳ ಕಾಲ ಜೊತೆಗಿದ್ದ ಪತಿ ಏಕಾಏಕಿ ಕಣ್ಮರೆಯಾಗಿರುವುದು ಮಹಿಳೆಗೆ ದಿಕ್ಕು ತೋಚದಂತಾಗಿದೆ. ಪತಿ ನಾಪತ್ತೆಯಾಗಿ ವರ್ಷ ಕಳೆದರು ವಾಪಾಸ್ಸು ಬಂದಿಲ್ಲವೆಂದು ಮಹಿಳೆಯೂ ಕಂಕುಳಲ್ಲೊಂದು, ಕೈಯಲ್ಲೊಂದು ಮಗುವನ್ನು ಹಿಡಿದು ಬಿಕ್ಕಿ ಬಿಕ್ಕಿ ಅಳುತ್ತಾ ಕಣ್ಣೀರು ಹಾಕುತ್ತಾ ಜಿಲ್ಲಾಧಿಕಾರಿಯ ಮೊರೆ ಹೋಗಿದ್ದಾಳೆ.

ಮಹಿಳೆ ಹೆಸರು ರೇಷ್ಮಾ. ಜಿಲ್ಲೆಯ ಕಾರವಾರದ ಬೈತಖೋಲ ನಿವಾಸಿಯಾಗಿರುವ ರೇಷ್ಮಾ, ಅಂಕೋಲಾ ತಾಲ್ಲೂಕಿನ ಹಾರವಾಡ ನಿವಾಸಿ ಮನೋಜ್ ಪೆಡ್ನೇಕರ್ ಎಂಬುವವರನ್ನ ಪ್ರೀತಿಸಿ ಕಳೆದ 2016ರಲ್ಲಿ ಮದುವೆಯೂ ಆಗಿದ್ದರು. ಮನೋಜ್ ಕಾರವಾರ ತಾಲ್ಲೂಕಿನ ಅರಗಾ ಗ್ರಾಮದಲ್ಲಿರುವ ಕದಂಬ ನೌಕಾನೆಲೆಯಲ್ಲಿ ಸ್ಕಿಲ್ಡ್ ವರ್ಕರ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಇವರಿಬ್ಬರಿಗೂ ಎರಡು ಹೆಣ್ಣುಮಕ್ಕಳು ಸಹ ಇದ್ದಾರೆ.

ಆರು ವರ್ಷಗಳ ಕಾಲ ಚೆನ್ನಾಗಿಯೇ ಸಂಸಾರ ಮಾಡಿಕೊಂಡಿದ್ದ ಮನೋಜ್ ಕಳೆದ 2022ರ ಜೂನ್ ತಿಂಗಳಲ್ಲಿ ಕೆಲಸಕ್ಕೆಂದು ಮನೆಯಿಂದ ಹೋದವನು ಮತ್ತೆ ವಾಪಸ್ ಬಂದಿಲ್ಲ. ಪತಿಯನ್ನು ಹುಡುಕಿಕೊಡುವಂತೆ ಕಾರವಾರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ರೇಷ್ಮಾ ದೂರು ಸಹ ದಾಖಲಿಸಿದ್ದರಾದರೂ ವರ್ಷ ಕಳೆಯುತ್ತಾ ಬಂದರೂ ಇದುವರೆಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಹೀಗಾಗಿ ಪತಿಯನ್ನ ಹುಡುಕಿಸಿಕೊಂಡುವಂತೆ ಇದೀಗ ಜಿಲ್ಲಾಧಿಕಾರಿಗಳ ಮೊರೆ ಹೋಗಿದ್ದಾರೆ.

ಇನ್ನು ನಾಪತ್ತೆಯಾಗುವ ಮುನ್ನ ಪತಿ ಮನೋಜ್ ಜೊತೆ ರೇಷ್ಮಾ ಸುಖವಾಗಿ ಸಂಸಾರ ಮಾಡಿಕೊಂಡಿದ್ದು, ಅತ್ತೆ ಹಾಗೂ ನಾದಿನಿಯೊಂದಿಗೆ ಸ್ವಂತ ಮನೆಯಲ್ಲಿ ವಾಸವಾಗಿದ್ದರು. ಆದರೆ, ಸಾಲದ ಸಮಸ್ಯೆಯಿದೆ ಎನ್ನುವ ಕಾರಣ ನೀಡಿ ಮನೋಜ್ ಇದ್ದ ಮನೆಯನ್ನೂ ಸಹ ಮಾರಾಟ ಮಾಡಿದ್ದು, ಬಾಡಿಗೆ ಮನೆಯಲ್ಲಿ ಸಂಸಾರ ನಡೆಸುತ್ತಿದ್ದಾಗಲೇ ಸ್ಮಿತಾ ಎರಡನೇಯ ಮಗುವಿಗೆ ಜನ್ಮ ನೀಡಿದ್ದರು. ಮಗು ಜನಿಸಿದ ಆರು ತಿಂಗಳವರೆಗೆ ಜೊತೆಗಿದ್ದ ಮನೋಜ್ ನಂತರ ಕಣ್ಮರೆಯಾಗಿದ್ದು, ಯಾವುದೇ ಸಂಪರ್ಕಕಕ್ಕೂ ಲಭ್ಯವಾಗಿಲ್ಲ. ಇತ್ತ ಮನೋಜ್ ನಾಪತ್ತೆಯಾದ ಬಳಿಕ ಜೀವನ ಸಾಗಿಸಲು ರೇಷ್ಮಾ ಕೆಲಸಕ್ಕೆ ಸೇರಿದ್ದು, ಅತ್ತೆ ಮನೆಯವರೂ ಈಕೆಯೊಂದಿಗೆ ಮಾತನಾಡುತ್ತಿಲ್ಲ. ಹೀಗಾಗಿ ಜೀವನ ನಡೆಸುವುದೇ ಕಷ್ಟವಾಗಿದ್ದು ಪತಿಯನ್ನ ಹುಡುಕಿಕೊಡುವಂತೆ ಮನವಿ ಮಾಡಿದ್ದಾರೆ.

- Advertisement -

Related news

error: Content is protected !!