Sunday, June 29, 2025
spot_imgspot_img
spot_imgspot_img

ಕಾರ್ಕಳ: ಜೋಕಾಲಿ ಆಟವಾಡುತ್ತಿದ್ದ ವೇಳೆ ಕುತ್ತಿಗೆಗೆ ಸೀರೆ ಸುತ್ತಿ ಬಾಲಕಿ ದಾರುಣ ಮೃತ್ಯು..!!

- Advertisement -
- Advertisement -

ಕಾರ್ಕಳ: ಜೋಕಾಲಿ ಆಟವಾಡುತ್ತಿದ್ದ ವೇಳೆ ಕತ್ತಿಗೆ ಸೀರೆ ಸುತ್ತಿ ಬಾಲಕಿಯೊಬ್ಬಳು ದಾರುಣವಾಗಿ ಮೃತಪಟ್ಟ ಘಟನೆ ಕಾರ್ಕಳ ತಾಲೂಕಿನ ನಿಟ್ಟೆಯ ಕೆಮ್ಮಣ್ಣು ಗ್ರಾಮದ ಅಂತೊಟ್ಟು ಎಂಬಲ್ಲಿ ನಡೆದಿದೆ.

ಅಂತೊಟ್ಟು ನಿವಾಸಿ ಪಿರ್ಯಾದಿ ಲಕ್ಷ್ಮಣ್ ಪೂಜಾರಿ ಎಂಬವರ ಮಗಳು ಮಾನ್ವಿ(9) ಜೀವ ಕಳೆದುಕೊಂಡ ಬಾಲಕಿಯಾಗಿದ್ದಾಳೆ.

ಮೇ 26ರ ಸಂಜೆ 4:00 ಗಂಟೆಗೆ ಮನೆಯ ಬಳಿ ನೆರೆ ಮನೆಯ ದೀಕ್ಷಾ ಎಂಬಾಕೆಯ ಜೊತೆ ಸೀರೆಯನ್ನು ಕಟ್ಟಿ ಜೋಕಾಲಿ ಆಟ ಆಡುವಾಗ ಆಕಸ್ಮಿಕವಾಗಿ ಜೋಕಾಲಿಗೆ ಕಟ್ಟಿದ ಸೀರೆ ಮಾನ್ವಿಯ ಕುತ್ತಿಗೆಗೆ ಸುತ್ತಿಕೊಂಡಿತ್ತು. ಈ ವೇಳೆ ತುರ್ತು ಚಿಕಿತ್ಸೆಗೆಂದು ನಿಟ್ಟೆ ಸಮುದಾಯ ಆರೋಗ್ಯ ಕೇಂದ್ರಕ್ಕೆ ಬಾಲಕಿಯನ್ನು ಕರೆದೊಯ್ಯಲಾಗಿತ್ತು . ವೈದ್ಯಾಧಿಕಾರಿಯವರು ಮಾನ್ವಿಯನ್ನು ಆರೋಗ್ಯ ತಪಾಸಣೆ ನಡೆದಿದ್ದು , ಅದಾಗಲೇ ಆಕೆ ಮೃತಪಟ್ಟಿರುವುದಾಗಿ ವೈದ್ಯರು ಖಚಿತ ಪಡಿಸಿದ್ದರು. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!