Friday, June 5, 2026
spot_imgspot_img
spot_imgspot_img

ಕಾಸರಗೋಡು: 116 ಕಿಲೋ ಗಾಂಜಾ ವಶ; ಓರ್ವ ಆರೋಪಿ ಅರೆಸ್ಟ್

- Advertisement -
- Advertisement -

ಕಾಸರಗೋಡು: ವರ್ಕಾಡಿ ಸುಳ್ಯಮೆ ಯಿಂದ ಸುಮಾರು 116 ಕಿಲೋ ಗಾಂಜಾ ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಪಟ್ಟಂತೆ ಓರ್ವ ಆರೋಪಿಯನ್ನು ಮಂಜೇಶ್ವರ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಮೈಸೂರು ಜಯಪುರ ಹೋಬಳಿಯ ಸಿದ್ದೇಗೌಡ (25) ಎಂದು ಗುರುತಿಸಲಾಗಿದೆ.

ಸುಳ್ಯಮೆಯ ಮನೆಯ ಶೆಡ್‌ವೊಂದರಲ್ಲಿ ಬಚ್ಚಿಟ್ಟಿದ್ದ ಗಾಂಜಾವನ್ನು ಅಕ್ಟೋಬರ್ 8 ರಂದು ರಾತ್ರಿ ವಶಪಡಿಸಿಕೊಂಡಿದ್ದರು.

ಗಾಂಜಾ ಸಾಗಾಟಕ್ಕೆ ಬಳಸುತ್ತಿದ್ದ ಮಿನಿ ಟೆಂಪೋವನ್ನು ವಶಕ್ಕೆ ತೆಗೆದುಕೊಂಡಿದ್ದರು ಪೊಲೀಸರು ನಡೆಸಿದ ತನಿಖೆಯಿಂದ ವಾಹನ ಚಾಲಕ ಸಿದ್ದೇಗೌಡನ ಮಾಹಿತಿ ಲಭಿಸಿತ್ತು. ತನಿಖೆಯನ್ನು ಮೈಸೂರಿಗೆ ವಿಸ್ತರಿಸಿದ್ದು, ಆರೋಪಿಯನ್ನು ಬಂಧಿಸಲಾಗಿದೆ.

- Advertisement -

Related news

error: Content is protected !!