Saturday, June 28, 2025
spot_imgspot_img
spot_imgspot_img

ಶಾಸಕರ ಅಭಿನಂದನಾ ಸಮಾರಂಭದಲ್ಲಿ ಯುವಕನ ಭೀಕರ ಹತ್ಯೆ; ಆರ್ಕೆಸ್ಟ್ರಾ ಹಾಡು ಬದಲಿಸುವ ವಿಚಾರದಲ್ಲಿ ಗಲಾಟೆ

- Advertisement -
- Advertisement -

ಶಾಸಕರ ಅಭಿನಂದನಾ ಸಮಾರಂಭದಲ್ಲಿ ರಕ್ತಪಾತವಾಗಿದ್ದು ಈ ಕೊಲೆಗೆ ಮುಖ್ಯ ಕಾರಣ ಏನು ಅಂತ ಕೇಳಿದ್ರೆ ನೀವು ಅಚ್ಚರಿಯಾಗೋದು ಖಂಡಿತಾ. ಕೇವಲ ಆರ್ಕೆಸ್ಟ್ರಾ ಹಾಡು ಬದಲಿಸುವ ವಿಚಾರಕ್ಕೆ ಗಲಾಟೆ ನಡೆದು ಹೆಣ ಬಿದ್ದಿದೆ.

ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ಪಟ್ಟಣದಲ್ಲಿ ಕಾಂಗ್ರೆಸ್​ ಶಾಸಕ ಶ್ರೀನಿವಾಸ್ ಅವರ ಅಭಿನಂದನಾ ಸಮಾರಂಭ ನಡೆಯುತ್ತಿತ್ತು. ಈ ವೇಳೆ ವರುಣ್ ಎಂಬಾತನ ಕೊಲೆ ನಡೆದಿತ್ತು. ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 7 ಆರೋಪಿಗಳನ್ನು ತರೀಕೆರೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ತರೀಕೆರೆ ನಿವಾಸಿಗಳಾದ ಕಬಾಬ್‌ ಮೂರ್ತಿ, ಮಂಜು, ನವೀನ್​​, ಧನು, ಈಶ್ವರ್​, ಪರಮೇಶ್ವರ್​, ನಿತಿನ್​ ಬಂಧಿತರು. ಘಟನೆ ಸಂಬಂಧ 12 ಜನರ ವಿರುದ್ಧ ಪ್ರಕರಣ ದಾಖಲಾಗಿತ್ತು. ವರುಣ್​ಗೆ ಚಾಕು ಇರಿದು ಕಬಾಬ್ ಮೂರ್ತಿ ಎಂಬಾತ ಪರಾರಿಯಾಗಿದ್ದ. ಘಟನೆ ನಡೆದಿತ್ತು.

ಶನಿವಾರ ರಾತ್ರಿ ಕಾಂಗ್ರೆಸ್​ ಶಾಸಕ ಶ್ರೀನಿವಾಸ್​ಗೆ ಅಭಿಮಾನಿಗಳು ಅಭಿನಂದನಾ ಸಮಾರಂಭ ಏರ್ಪಡಿಸಿದ್ದರು. ಸಮಾರಂಭದಲ್ಲಿ ಆರ್ಕೆಸ್ಟ್ರಾ ಹಾಡು ಬದಲಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಕಬಾಬ್ ಮೂರ್ತಿ ಹಾಗೂ ವರುಣ್ ಎಂಬುವವರ ಮಧ್ಯೆ ಗಲಾಟೆಯಾಗಿದೆ.

ಈ ವೇಳೆ ಮಾತಿಗೆ ಮಾತು ಬೆಳೆದು ಎರಡು ಗುಂಪುಗಳು ಕೈ ಮಿಲಾಯಿಸುವ ಹಂತಕ್ಕೆ ಹೋಗಿದೆ. ಬಳಿಕ ಆರ್ಕೆಸ್ಟ್ರಾ ಮುಗಿಯುತ್ತಿದ್ದಂತೆ ಕಬಾಬ್ ಮೂರ್ತಿ ವರುಣ್​ಗೆ ಡ್ರ್ಯಾಗರ್​ನಿಂದ ಇರಿದು ಕೊಲೆ ಮಾಡಿದ್ದಾನೆ. ಈ ವೇಳೆ ಮಂಜು ಹಾಗೂ ಸಂಜು ಎಂಬಿಬ್ಬರ ಕೈ ಹಾಗೂ ಕಾಲಿಗೆ ಗಾಯಗಳಾಗಿದೆ. ಬಳಿಕ ಸ್ಥಳಕ್ಕೆ ಎಸ್ಪಿ ಉಮಾ ಪ್ರಶಾಂತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

- Advertisement -

Related news

error: Content is protected !!