- Advertisement -
- Advertisement -
ವಿಟ್ಲ: ಆಕ್ಟಿವಾ ಹಾಗೂ ಜೀಪ್ ಡಿಕ್ಕಿಯಿಂದ ಗಂಭೀರ ಗಾಯಗೊಂಡ ದ್ವಿಚಕ್ರ ವಾಹನ ಸವಾರ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ಪೆರುವಾಯಿ ಮುಳ್ಳೆಚ್ಚಿ ನಿವಾಸಿ ಚೇತನ್ ಪೂಜಾರಿ(19) ಪೆರುವಾಯಿಂದ ಆಕ್ಟಿವಾದಲ್ಲಿ ಬರುತ್ತಿದ್ದ ವೇಳೆ ಕುದ್ದುಪದವು ಕಡೆಯಿಂದ ಬಂದ ಜೀಪಿಗೆ ಡಿಕ್ಕಿಯಾಗಿ ಗಂಭೀರ ಗಾಯಗೊಂಡು ಮಂಗಳೂರು ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತ ಪಟ್ಟಿದ್ದು, ಈ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -