Saturday, June 28, 2025
spot_imgspot_img
spot_imgspot_img

ತಂದೆಯ ಎದುರೇ ಮಗನನ್ನು ನುಂಗಿ ಬಲಿಪಡೆದ ಶಾರ್ಕ್‌

- Advertisement -
- Advertisement -

ಭಯಾನಕ ಶಾರ್ಕ್‌ ಮೀನು ವ್ಯಕ್ತಿಯೊಬ್ಬನನ್ನು ಸಾರ್ವಜನಿಕರ ಎದುರಲ್ಲೇ ಬಲಿ ಪಡೆದಿದೆ. ಈ ಘಟನೆ ಈಜಿಪ್ಟ್‌ನ ಹುರ್ಗಾಡಾ ನಗರದ ಬಳಿ ಕೆಂಪು ಸಮುದ್ರದಲ್ಲಿ ನಡೆದಿದೆ. ರಷ್ಯಾದ ವ್ಯಕ್ತಿಯನ್ನು ನರಭಕ್ಷಕ ಶಾರ್ಕ್‌, ಜೀವಂತವಾಗಿ ನುಂಗಿದೆ. ಈ ಮೀನನ್ನು ಸಾರ್ವಜನಿಕರು ಸೆರೆಹಿಡಿದಿದ್ದಾರೆ.

ಶಾರ್ಕ್‌ ದಾಳಿಗೆ ಬಲಿಯಾಗಿರುವ ವ್ಯಕ್ತಿಯನ್ನು ವ್ಲಾಡಿಮಿರ್‌ ಪೊಪೊವ್‌ ಎಂದು ಗುರುತಿಸಲಾಗಿದೆ. ಶಾರ್ಕ್‌ ಮೀನು ಸಜೀವವಾಗಿ ಮಗನನ್ನು ನುಂಗಿ ಹಾಕುತ್ತಿರುವ ಭಯಾನಕ ದೃಶ್ಯವನ್ನು ಆತನ ತಂದೆ ಕೂಡ ನೋಡಿದ್ದಾರೆ.

ಶಾರ್ಕ್‌ ವ್ಯಕ್ತಿಯ ಮೇಲೆ ದಾಳಿ ಮಾಡಿ ಆತನನ್ನು ಜೀವಂತ ನುಂಗಿ ಹಾಕಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಈಗಾಗ್ಲೇ ವೈರಲ್‌ ಆಗಿದೆ. ಸ್ಥಳೀಯರು ಶಾರ್ಕ್‌ ಮೀನೊಂದನ್ನು ಸೆರೆಹಿಡಿದಿದ್ದಾರೆ. ಆದರೆ ಸೆರೆಸಿಕ್ಕಿರುವ ಮೀನು ನರಭಕ್ಷಕ ಎಂಬುದಕ್ಕೆ ಸಾಕ್ಷ್ಯವೇನು ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ. ಸ್ಥಳೀಯರು ಬೇರೆ ಮೀನನ್ನು ಸೆರೆಹಿಡಿದಿರುವ ಸಾಧ್ಯತೆಯೂ ಇದೆ ಎಂಬ ಕಮೆಂಟ್‌ಗಳು ಹರಿದಾಡುತ್ತಿವೆ.

- Advertisement -

Related news

error: Content is protected !!