Friday, July 24, 2026
spot_imgspot_img
spot_imgspot_img

ಬಂಟ್ವಾಳ: ಆಂಬ್ಯುಲೆನ್ಸ್‌ನಲ್ಲಿಯೇ ಮಗುವಿಗೆ ಜನ್ಮ ನೀಡಿದ ತಾಯಿ..!!

- Advertisement -
- Advertisement -
vtv vitla

ಬಂಟ್ವಾಳ: ತೆಕ್ಕಿ ಪಡ್ಪು ನಿವಾಸಿ ಮನೋರಂಜನ್ ಶೆಟ್ಟಿ ಇವರ ಪತ್ನಿ ಪ್ರಮೀಳಾ ವಿ. ಎ ಇವರು ಆಂಬ್ಯುಲೆನ್ಸ್‌ನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ ಘಟನೆ ನಡೆದಿದೆ.

ಬೆಳಿಗ್ಗೆ ತೀವ್ರವಾಗಿ ಹೆರಿಗೆ ನೋವು ಬಂದ ಕಾರಣ ಕಡೇಶಿವಾಲಯದ ಚಿಂತಾಮಣಿ ಆಂಬ್ಯುಲೆನ್ಸ್‌ನಲ್ಲಿ ಚಾಲಕ ನಜೀರ್ ಬೋಳಂತೂರು ಹಾಗೂ ಮಹೇಶ್ ಕಡೇಶಿವಾಲಯ ಇವರ ಸಹಕಾರದೊಂದಿಗೆ ಆಸ್ಪತ್ರೆಗೆ ತೆರಳುತ್ತಿದ್ದ ವೇಳೆ ಪಡೀಲ್ ಅಯ್ಯಪ್ಪ ಮಂದಿರದ ಬಳಿ ತಲುಪುತ್ತಿದ್ದಂತೆ ಪ್ರಮೀಳಾ ಅವರು ಆಂಬ್ಯುಲೆನ್ಸ್‌ನಲ್ಲಿಯೇ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

ಬಳಿಕ ಆಸ್ಪತ್ರೆಗೆ ಕರೆದೊಯ್ದು ಪರಿಶೀಲಿಸಿದ ವೈದ್ಯರು ತಾಯಿ ಮಗು ಸುರಕ್ಷಿತವಾಗಿದ್ದಾರೆ ಎಂದು ತಿಳಿಸಿದ್ದಾರೆ.

- Advertisement -

Related news

error: Content is protected !!