Sunday, August 2, 2026
spot_imgspot_img
spot_imgspot_img

ಅಪರಿಚಿತ ಬಾಲಕನ ಮೃತದೇಹ ಪತ್ತೆ; ಗುರುತು ಪತ್ತೆ ಹಚ್ಚುವಂತೆ ಮನವಿ

- Advertisement -
- Advertisement -

ದೇವಭಾಗ ಸಮುದ್ರ ಕಿನಾರೆಯಲ್ಲಿ ಅಪರಿಚಿತ ಬಾಲಕನೋರ್ವನ ಶವ ಪತ್ತೆಯಾಗಿದೆ. ಮೃತದೇಹವು ಕಾರಾವಾರದ ಚಿತ್ತಾಕುಲಾ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಇರಿಸಲಾಗಿದ್ದು, ಬಾಲಕನ ವಾರಸುದಾರರು ಗುರುತು ಪತ್ತೆ ಹಚ್ಚುವಂತೆ ಪೊಲೀಸರು ಮನವಿ ಮಾಡಿದ್ದಾರೆ.

ಮೃತ ಬಾಲಕನ ವಯಸ್ಸು ಸುಮಾರು 12-14 ವರ್ಷ ಆಗಿರಬಹುದೆಂದು ಅಂದಾಜಿಸಲಾಗಿದ್ದು, ಸಾಧಾರಣ ಮೈಕಟ್ಟು ಗೋಧಿ ಮೈಬಣ್ಣ ಹೊಂದಿದ್ದಾರೆ. ಶವದ ಮೇಲೆ ಕಪ್ಪು ಬಣ್ಣದ ತನ್ನ ಪ್ಯಾಂಟ್‌ ಹಾಗೂ ಮೆಹಂದಿ ಬಣ್ಣದ ಅರ್ಧ ತೋಳಿನ ಶರ್ಟ್‌ ಹಾಗೂ ಅದರೊಳಗಡೆ ಬಿಳಿ ಬಣ್ಣದ ಬನಿಯನ್‌ ಧರಿಸಿರುತ್ತಾನೆ ಹಾಗೂ ಕಾಲಿನಲ್ಲಿ ಕಪ್ಪು ಬಣ್ಣದ ಬೆಲ್ಟ್‌ ಚಪ್ಪಲ ಧರಿಸಿದ್ದಾನೆ.

ಬಾಲಕನ ವಾರಸುದಾರರು ಇದ್ದಲ್ಲಿ ಚಿತ್ತಾಕುಲಾ ಪೊಲೀಸ್ ಠಾಣೆಗೆ ಅಥವಾ ಕಂಟ್ರೋಲ್‌ ರೂಮ್‌ಗೆ ತಿಳಿಸಲು ಕೋರಿದೆ.
ಚಿತ್ತಾಕುಲಾ ಪೊಲೀಸ್ ಠಾಣೆ (08382) 265733,
ಮೊಬೈಲ್‌ 9480805248
ಪೊಲೀಸ್ ಕಂಟ್ರೋಲ್ ರೂಮ್ ಉತ್ತರ ಕನ್ನಡ ಕಾರವಾರ -08382-226550

- Advertisement -

Related news

error: Content is protected !!