17 ವರ್ಷದ ಬಾಲಕಿ ತನ್ನ ಶಾಲೆಯ 21 ವರ್ಷದ ಶಿಕ್ಷಕಿಯೊಂದಿಗೆ ಓಡಿಹೋದ ಘಟನೆ ನಡೆದಿದ್ದು ಈ ಘಟನೆಯ ಹಿಂದೆ ವ್ಯವಸ್ಥಿತ ಲವ್ ಜಿಹಾದ್ ಇದೆ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಿಕ್ಷಕಿ ನಿದಾ ಬಹ್ಲಿಮ್ ತನ್ನ ಸಹೋದರರೊಂದಿಗೆ ಸೇರಿಕೊಂಡು, ಮತಾಂತರ ಮಾಡುವ ಉದ್ದೇಶದಿಂದ ಅಪಹರಿಸಿದ್ದಾಗಿ ಪೋಷಕರು ಗಂಭೀರ ಆರೋಪ ಮಾಡಿದ್ದಾರೆ. ಬಿಕಾನೇರ್ನ ಶ್ರೀದುಂಗರ್ಗಢ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
2nd PUC ವಿದ್ಯಾರ್ಥಿನಿ ಜೂನ್ 30 ರಂದು ನಾಪತ್ತೆಯಾಗಿದ್ದಾಳೆ. ಆಕೆಯ ಪೋಷಕರು ಅಪಹರಣದ ಎಫ್ಐಆರ್ ದಾಖಲಿಸಿದ್ದಾರೆ. ಸ್ಥಳೀಯರು ಪೊಲೀಸ್ ಠಾಣೆಗೆ ಆಗಮಿಸಿ ಬಾಲಕಿ ಅಪ್ರಾಪ್ತ ವಯಸ್ಸಿನವಳಾಗಿರುವುದರಿಂದ ಆಕೆಯನ್ನು ರಕ್ಷಿಸುವಂತೆ ಮತ್ತು ಶಿಕ್ಷಕಿಯನ್ನು ಬಂಧಿಸುವಂತೆ ಒತ್ತಾಯಿಸಿದರು.
ಬಾಲಕಿ ಜೂನ್ 30ರಂದು ಶಾಲೆಗೆ ಹೋಗಿದ್ದು, ಸಂಜೆವರೆಗೂ ವಾಪಸ್ ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಆಕೆಯ ಪೋಷಕರು ಆಕೆಯ ಸಂಬಂಧಿಕರು ಮತ್ತು ಸ್ನೇಹಿತರ ಮನೆಗಳಲ್ಲಿ ಅವಳನ್ನು ಹುಡುಕಿದರು ಆದರೆ ಸಂಜೆಯವರೆಗೂ ಅವಳ ಸುಳಿವು ಸಿಕ್ಕಿರಲಿಲ್ಲ. ಪ್ರಥಮ ಮಾಹಿತಿ ವರದಿಯಲ್ಲಿ ಆಕೆಯ ಮಹಿಳಾ ಶಿಕ್ಷಕಿ ತನ್ನನ್ನು ಅಪಹರಿಸಿದ್ದಾರೆ ಎಂದು ಆರೋಪಿಸಿದ್ದರು. ವಿದ್ಯಾರ್ಥಿನಿ ಮತ್ತು ಆಕೆಯ ಶಿಕ್ಷಕಿ ದೀರ್ಘ ಕಾಲದಿಂದ ಉತ್ತಮ ಸ್ನೇಹ ಹೊಂದಿದ್ದರು. ಈ ಹಿನ್ನಲೆ ಇಬ್ಬರೂ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ನಿದಾ ಬಹ್ಲಿಮ್ ಚಾಲಾಕಿ ಶಿಕ್ಷಕಿ. ಎರಡು ತಿಂಗಳಿಂದ ನನ್ನ ಮಗಳಿಗೆ ಹತ್ತಿರವಾಗುತ್ತಿದ್ದಳು. ತನ್ನ ಇಬ್ಬರು ಸಹೋದರರಾದ ನಾವೇದ್ ಮತ್ತು ಜುನೈದ್ ಜೊತೆ ಸೇರಿ ಈ ಕೃತ್ಯ ಎಸಗಿದ್ದಾಳೆ ಎಂದು ಮಗಳ ತಂದೆ ಆರೋಪಿಸಿದ್ದಾರೆ.
ಜೈಪುರ ರೈಲು ನಿಲ್ದಾಣದ ನಂಬರ್ ಪ್ಲಾಟ್ಫಾರ್ಮ್ನಲ್ಲಿ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾದಲ್ಲಿ ಇಬ್ಬರೂ ಸಹ ಕಾಣಿಸಿಕೊಂಡಿದ್ದಾರೆ. ಆದರೆ ಇಬ್ಬರೂ ಯಾವುದಾದರೂ ರೈಲಿನಲ್ಲಿ ಎಲ್ಲೋ ಹೋಗಿದ್ದಾರೋ ಅಥವಾ ಎಲ್ಲಿದ್ದಾರೋ ಎಂಬುವುದು ಈ ವರೆಗೆ ತಿಳಿದುಬಂದಿಲ್ಲ.