Friday, November 13, 2026
spot_imgspot_img
spot_imgspot_img

ಫುಜೈರಾದಲ್ಲಿ ಭೀಕರ ರಸ್ತೆ ಅಪಘಾತ: ಕೇರಳ ಮೂಲದ 21 ವರ್ಷದ ಅವಳಿ ಸಹೋದರ-ಸಹೋದರಿ, ಮೂರು ವರ್ಷದ ಬಾಲಕ ಮೃತ್ಯು

- Advertisement -
- Advertisement -

ಫುಜೈರಾ: ಯುಎಇಯ ಫುಜೈರಾದಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕೇರಳ ಮೂಲದ ಒಂದೇ ಕುಟುಂಬದ ಮೂವರು ಮೃತಪಟ್ಟಿರುವ ಘಟನೆ ವರದಿಯಾಗಿದೆ.

ಮೃತರಲ್ಲಿ 21 ವರ್ಷದ ಅವಳಿ ಸಹೋದರ-ಸಹೋದರಿ ಹಾಗೂ ಮೂರು ವರ್ಷದ ಬಾಲಕ ಸೇರಿದ್ದಾರೆ.ಮೃತರನ್ನು ಮಲಪ್ಪುರಂ ಜಿಲ್ಲೆಯ ವೇಂಗರಕುಂನಪುರಂ ನಿವಾಸಿ ಸಿದ್ದೀಕ್ ಅವರ ಮಕ್ಕಳಾದ ಮೊಹಮ್ಮದ್ ಅಸ್ಮಿಲ್ (21) ಮತ್ತು ಮಿಸ್ನಾ ಜುಬಿನ್ (21) ಹಾಗೂ ಅವರ ಪುತ್ರಿ ಫರ್ಝಾನ ಅವರ ಮೂರು ವರ್ಷದ ಮಗ ಮೊಹಮ್ಮದ್ ಫಾಯಿಸ್ ಎಂದು ಗುರುತಿಸಲಾಗಿದೆ.

ಬುಧವಾರ ರಾತ್ರಿ ಶಾರ್ಜಾದಿಂದ ಫುಜೈರಾಗೆ ಕುಟುಂಬದ ಸದಸ್ಯರು ಕಾರಿನಲ್ಲಿ ಹಿಂದಿರುಗುತ್ತಿದ್ದ ವೇಳೆ ಫುಜೈರಾ ಕೋರ್ಟ್ ಹೌಸ್ ಸಮೀಪ ಕಾರು ಟ್ರಕ್‌ಗೆ ಹಿಂಬದಿಯಿಂದ ಢಿಕ್ಕಿ ಹೊಡೆದಿದೆ.

ಅಪಘಾತದ ತೀವ್ರತೆಗೆ ಕಾರಿನಲ್ಲಿದ್ದ ಮೂವರು ಮೃತಪಟ್ಟಿದ್ದು, ನಾಲ್ವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ ಎಂದು ವರದಿಯಾಗಿದೆ.

- Advertisement -

Related news

error: Content is protected !!