Tuesday, April 30, 2024
spot_imgspot_img
spot_imgspot_img

ಐಪಿಲ್ ಪಂದ್ಯ-ಆರ್ ಆರ್ vs ಕೆಕೆಆರ್

- Advertisement -G L Acharya panikkar
- Advertisement -

ದುಬೈ: ಐಪಿಎಲ್ ಅಂಗಳದಲ್ಲಿ ಇಂದು ರಾಜಸ್ಥಾನ್ ರಾಯಲ್ಸ್​ಗೆ ಕೊಲ್ಕತ್ತಾ ನೈಟ್ ರೈಡರ್ಸ್ ಸವಾಲೆಸೆಯಲಿದೆ. ಆಡಿರುವ 2 ಪಂದ್ಯಗಳಲ್ಲೂ ಗೆಲುವು ಕಂಡಿರುವ ರಾಜಸ್ಥಾನ್ ರಾಯಲ್ಸ್ ಇಂದಿನ ಪಂದ್ಯದಲ್ಲೂ ಗೆಲ್ಲುವ ವಿಶ್ವಾಸದಲ್ಲಿದೆ. ಹಾಗೆಯೇ ಸನ್​ರೈಸರ್ಸ್​ ಹೈದರಾಬಾದ್ ವಿರುದ್ಧ ಭರ್ಜರಿ ಜಯ ದಾಖಲಿಸುವ ಮೂಲಕ ಕೆಕೆಆರ್ ಮೊದಲ ಜಯದ ಖಾತೆ ತೆರೆದಿದೆ. ಹೀಗಾಗಿ ಇಂದಿನ ಪಂದ್ಯದಲ್ಲೂ ಕೊನೆಯ ಪಂದ್ಯದ ಫಲಿತಾಂಶವನ್ನು ನೀಡುವ ವಿಶ್ವಾಸದಲ್ಲಿದೆ ಕೊಲ್ಕತ್ತಾ ನೈಟ್​ ರೈಡರ್ಸ್​.

ಒಂದು ವೇಳೆ ಇಂದಿನ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್​ ವಿರುದ್ಧ ಗೆದ್ದರೆ ಅಂಕಪಟ್ಟಿಯಲ್ಲಿ 7ನೇ ಸ್ಥಾನದಿಂದ 4ನೇ ಸ್ಥಾನಕ್ಕೇರಲಿದೆ. ಇನ್ನು ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಸ್ಮಿತ್ ಪಡೆಯು ಅದೇ ಸ್ಥಾನವನ್ನು ಕಾಯ್ದುಕೊಳ್ಳಲು ಸಕಲ ತಯಾರಿಯೊಂದಿಗೆ ಕಣಕ್ಕಿಳಿಯಲಿದೆ. ಉಭಯ ತಂಡಗಳು ಬಲಿಷ್ಠ ಆಟಗಾರರನ್ನು ಒಳಗೊಂಡಿರುವುದರಿಂದ ಇಂದಿನ ಪಂದ್ಯದಲ್ಲೂ ಭರ್ಜರಿ ಪೈಪೋಟಿ ನಿರೀಕ್ಷಿಸಬಹುದು.

- Advertisement -

Related news

error: Content is protected !!