Monday, June 15, 2026
spot_imgspot_img
spot_imgspot_img

ರೀಲ್ಸ್ ಮಾಡಲು ಐಫೋನ್ 14 ಖರೀದಿಸಲು ಮಗುವನ್ನೇ ಮಾರಿದ ದಂಪತಿ

- Advertisement -
- Advertisement -

ಪಶ್ಚಿಮ ಬಂಗಾಳದ ಉತ್ತರ  ಪರಗಣ ಜಿಲ್ಲೆಯ ಜಯದೇವ್ ಘೋಷ್ ಮತ್ತು ಸತಿ ಎಂಬ ದಂಪತಿ ‘ಐಫೋನ್ 14’ ಖರೀದಿಸಲು ಎಂಟು ತಿಂಗಳ ಗಂಡು ಮಗುವನ್ನು ಮಾರಾಟ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಎಲ್ಲಾ ಜನರ ಹಾಗೆ ತಾವು   ಇನ್ಸ್ಟಾಗ್ರಾಮ್ ನಲ್ಲಿ ರೀಲ್ಸ್ ಮಾಡಬೇಕು ಅದಕ್ಕಾಗಿ ‘ಐಫೋನ್ 14 ‘ ಕೊಂಡುಕೊಂಡರೆ ಒಳ್ಳೆಯದು ಎಂದುಕೊಂಡಿದ್ದು,  ದುಬಾರಿ ಫೋನ್​ ಖರೀದಿಸಲು ಹಣ ಹೊಂದಿಸುವುದು ಹೇಗೆಂಬುದೇ ದೊಡ್ಡ ಸಮಸ್ಯೆವಾದುದ್ದರಿಂದ ತಮ್ಮ ಎಂಟು ತಿಂಗಳ ಮಗುವನ್ನೇ ಮಾರಾಟ ಮಾಡಿದ್ದಾರೆ.
ಈ ದಂಪತಿಗೆ ಏಳು ವರ್ಷದ ಮಗಳೊಬ್ಬಳು ಇದ್ದಾಳೆ ಎಂದು ತಿಳಿದುಬಂದಿದೆ.

ಅದೇ ಜಿಲ್ಲೆಯ ಖರ್ದಾಹ್ ನಿವಾಸಿ ಪ್ರಿಯಾಂಕಾ ಘೋಷ್ ಎಂಬಾಕೆಯಿಂದ ಪೊಲೀಸರು ಮಗುವನ್ನು ರಕ್ಷಿಸಿದ್ದಾರೆ. ಬಾಲಕನ ತಾಯಿ ಮತ್ತು ಹಣ ನೀಡಿದ ಎಂಎಸ್ ಘೋಷ್ ಎಂಬವರನ್ನೂ ಪೊಲೀಸರು ಬಂಧಿಸಿದ್ದಾರೆ. ಮಗುವಿನ ತಂದೆ ವಿಷಯ ತಿಳಿದುಕೂಡಲೇ ಪರಾರಿಯಾಗಿದ್ದಾರೆ.

- Advertisement -

Related news

error: Content is protected !!