ದುರಸ್ತಿ ಕಾರ್ಯ ನಡೆಸಲು ಜೆಸಿಬಿ ಇಲ್ಲದಂತಾಗಿದೆ- ಪ ಪಂ ವಿರುದ್ದ ಗ್ರಾಮಸ್ಥರ ಆಕ್ರೋಶ..!
ವಿಟ್ಲ: ವಿಟ್ಲ ಪಟ್ಟಣ ವ್ಯಾಪ್ತಿಯಲ್ಲಿ ಅಲ್ಲಲ್ಲಿ ಭಾರೀ ಮಳೆಗೆ ಗುಡ್ಡ ಕುಸಿತ, ಮನೆಗಳಿಗೆ ನೀರು ನುಗ್ಗಿದ್ದು, ತುರ್ತು ಸೇವೆಗೆ ಬೇಕಾದ ಜೆಸಿಬಿ ವಾಹನ ಕೆಟ್ಟು ನಿಂತಿದ್ದು, ಇದುವರೆಗೂ ದುರಸ್ತಿ ಮಾಡಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.
ವಿಟ್ಲ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಅಲ್ಲಲ್ಲಿ ಗುಡ್ಡ, ಕುಸಿತ ಘಟನೆಗಳು ನಡೆಯುತ್ತಿದೆ. ವಿಟ್ಲ ಪಟ್ಟಣ ಪಂಚಾಯಿತಿ ಕಾಮಗಾರಿ ಮತ್ತು ತುರ್ತು ಕಾರ್ಯಗಳಿಗೆ ಅಗತ್ಯತೆಗಾಗಿ ಹೊಸ ಜೆಸಿಬಿ ಖರೀದಿಸಲಾಗಿತ್ತು. ಕೆಲವು ಸಮಯಗಳ ಹಿಂದೆ ಅದನ್ನು ದುರಸ್ತಿಗೆ ಬಂದಿತ್ತು. ಒಂದು ಲಕ್ಷ ರೂ. ವೆಚ್ಚದಲ್ಲಿ ರಿಪೇರಿ ಮಾಡಲಾಗಿತ್ತು. ಅದಾದ ಕೆಲವೇ ದಿನಗಳಲ್ಲಿ ಮತ್ತೆ ಕೆಟ್ಟು ಹೋಗಿದ್ದು, ಪ.ಪಂ ಆಡಳಿತಾಧಿಕಾರಿ ಬಂಟ್ವಾಳ ತಹಶಿಲ್ದಾರರು ದುರಸ್ತಿ ನಡೆಸಲು ಸೂಚನೆ ನೀಡಿದ್ದರೂ ಇನ್ನೂ ಕೂಡಾ ದುರಸ್ತಿಗೆ ಮುಂದಾಗಿಲ್ಲ. ಇದರಿಂದ ಅಲ್ಲಲ್ಲಿ ಮಳೆಗೆ ತೊಂದರೆಯಾಗಿದ್ದು, ಚರಂಡಿ ದುರಸ್ತಿ ಮಾಡಲು ಜೆಸಿಬಿ ಇಲ್ಲದಂತಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.